Monday, October 13, 2025
Homeಚುನಾವಣೆ 2023ಆರ್.ಅಶೋಕ್ ವಿರುದ್ಧ ಡಿ.ಕೆ.ಸುರೇಶ್ ಸ್ಪರ್ಧೆ?

ಆರ್.ಅಶೋಕ್ ವಿರುದ್ಧ ಡಿ.ಕೆ.ಸುರೇಶ್ ಸ್ಪರ್ಧೆ?

ಬೆಂಗಳೂರು: ಕನಕಪುರದಲ್ಲಿ ಡಿ.ಕೆ.ಶಿವಕುಮಾರ್ ಎದುರು ಸ್ಪರ್ಧಿಸುತ್ತಿರುವ ಆರ್.ಅಶೋಕ್ ಅವರಿಗೆ ಪದ್ಮನಾಭನಗರದಲ್ಲೇ ಟಕ್ಕರ್ ಕೊಡಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. ಬುಧವಾರ ಸ್ವತಃ ಡಿ.ಕೆ.ಸುರೇಶ್ ಈ ಬಗ್ಗೆ ಪ್ರತಿಕ್ರಿಯಿಸಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧ. ಅವರು ಪದ್ಮನಾಭನಗರದಲ್ಲಿ ಸ್ಪರ್ಧಿಸಲು ಹೇಳಿದರೆ ಸ್ಪರ್ಧಿಸಲು ಸಿದ್ದನಿದ್ದೇನೆ ಎಂದಿದ್ದಾರೆ.

ಪದ್ಮನಾಭನಗರ ಕ್ಷೇತ್ರದಿಂದ ಬಿಫಾರ್ಮ್ ಪಡೆದಿದ್ದ ರಘುನಾಥ್ ನಾಯ್ಡು ಬುಧವಾರ ಭರ್ಜರಿ ಮೆರವಣಿಗೆಯೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಪ್ರತಿಪಕ್ಷದ ಮುಖಂಡ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವರು ಹಾಜರಿದ್ದರು.

ರಘುನಾಥ್ ನಾಯ್ಡು ಸಹ ತಮ್ಮನ್ನು ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಆಹ್ವಾನಿಸಿದ್ದಾರೆ. ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಳ್ಳುವಂತೆ ಹೈಕಮ್ಯಾಂಡ್ ಸೂಚನೆ ನೀಡಿದ್ದರೂ ಸಹ, ಇದುವರೆಗೂ ಯಾವ ಕ್ಷೇತ್ರ ಎಂದು ಹೇಳಿಲ್ಲ ಎಂದು ವಿವರಿಸಿರುವ ಡಿ.ಕೆ.ಸುರೇಶ್, ಪದ್ಮನಾಭನಗರದಲ್ಲಿ ಸ್ಪರ್ಧಿಸಬಹುದಾದ ಸುಳಿವು ನೀಡಿದ್ದಾರೆ.

ಹೆಚ್ಚಿನ ಸುದ್ದಿ