Monday, October 13, 2025
Homeಚುನಾವಣೆ 2023ಜ್ಯೋತಿಷಿಗಳ ಸಲಹೆಯೇ ಡಿ.ಕೆ.ಸುರೇಶ್‌ ಸ್ಪರ್ಧೆಗೆ ಕಾರಣ – ಅಶೋಕ್‌ ಲೇವಡಿ

ಜ್ಯೋತಿಷಿಗಳ ಸಲಹೆಯೇ ಡಿ.ಕೆ.ಸುರೇಶ್‌ ಸ್ಪರ್ಧೆಗೆ ಕಾರಣ – ಅಶೋಕ್‌ ಲೇವಡಿ

ಬೆಂಗಳೂರು : ಕೊನೆಯ ಕ್ಷಣದಲ್ಲಿ ಕನಕಪುರದಿಂದ ಡಿ.ಕೆ.ಸುರೇಶ್‌ ಗುರುವಾರ ನಾಮಪತ್ರ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿರುವ ಸಚಿವ ಆರ್‌.ಅಶೋಕ್‌, ಅವರು ಜ್ಯೋತಿಷಿಗಳನ್ನು ಬಹಳ ನಂಬುತ್ತಾರೆ. ಅವರ್ಯಾರೋ ನಾಮಪತ್ರ ಸಲ್ಲಿಸುವಂತೆ ಸಲಹೆ ನೀಡಿರಬೇಕು ಎಂದು ವ್ಯಂಗ್ಯವಾಡಿದ್ದಾರೆ. ಜೊತೆಗೆ ನಾನು ಕನಕಪುರದಲ್ಲಿ ಸ್ಪರ್ಧಿಸುತ್ತಿದ್ದಂತೆಯೇ ಅಲ್ಲಿ ಡಿ.ಕೆ.ಸುರೇಶ್‌ ನಾಮಪತ್ರ ಸಲ್ಲಿಸಿದ್ದು, ಪದ್ಮನಾಭನಗರದಲ್ಲೂ ಎದುರಾಳಿಗಾಗಿ ನಿರೀಕ್ಷಿಸುತ್ತಿದ್ದೇ ಎಂದಿದ್ದಾರೆ.

ನನ್ನ ಎಲ್ಲಾ ಗೆಳೆಯರನ್ನೂ ಡಿ.ಕೆ.ಶಿವಕುಮಾರ್‌ ಪೋನ್‌ ಮೂಲಕ ಸಂಪರ್ಕಿಸಿದ್ದು, ಮಾಹಿತಿ ಪಡೆದ ಮೇಲೆ ಪದ್ಮನಾಭನಗರದಲ್ಲಿ ಸ್ಪರ್ಧಿಸಲು ಅವರಿಗೆ ಧೈರ್ಯ ಸಾಕಾಗಿಲ್ಲ ಎಂದು ಟೀಕಿಸಿರುವ ಆರ್‌ ಅಶೋಕ್‌, ಪದ್ಮ ಎಂದರೆ ಕಮಲ. ಎಲ್ಲಿ ಸಹಜವಾಗಿಯೇ ಕಮಲ ಅರಳುತ್ತದೆ. ಬಿಜೆಪಿಯ ಶಿಸ್ತಿನ ಸಿಪಾಯಿಯಾಗಿ ನಾನು ಹೋರಾಡಲಿದ್ದೇನೆ ಎಂದು ನುಡಿದಿದ್ದಾರೆ.

ಇಪ್ಪತ್ತು ಲಾಯರ್‌ ಗಳು , ಇಪ್ಪತ್ತು ಆಡಿಟರ್‌ಗಳನ್ನು ಇಟ್ಟುಕೊಂಡಿರುವ ಡಿ.ಕೆ.ಶಿವಕುಮಾರ್‌ ಅವರಿಗೆ ತಮ್ಮ ನಾಮಪತ್ರದ ಬಗ್ಗೆ ಭಯವೇಕೆ ಎಂದಿರುವ ಆರ್‌.ಅಶೋಕ್‌ ಜ್ಯೋತಿಷ್ಯ ಅವರಿಗೆ ಗೆಲುವು ತಂದುಕೊಡಲಾರದು ಎಂದಿದ್ದಾರೆ.

ಹೆಚ್ಚಿನ ಸುದ್ದಿ