Monday, July 7, 2025
Homeಚುನಾವಣೆ 2023ಬಿಜೆಪಿ 40% ಸರ್ಕಾರವೇ ಆಗಿತ್ತು: ಎಂಪಿ ಕುಮಾರಸ್ವಾಮಿ ವಾಗ್ದಾಳಿ

ಬಿಜೆಪಿ 40% ಸರ್ಕಾರವೇ ಆಗಿತ್ತು: ಎಂಪಿ ಕುಮಾರಸ್ವಾಮಿ ವಾಗ್ದಾಳಿ

ಚಿಕ್ಕಮಗಳೂರು: ಬಿಜೆಪಿ ಟಿಕೆಟ್‌ ವಂಚಿತರಾಗಿ ಜೆಡಿಎಸ್‌ ಸೇರಿರುವ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಅವರು ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ 40% ಸರ್ಕಾರವೇ ಆಗಿತ್ತು ಎಂದು ಹೇಳಿರುವ ಕುಮಾರಸ್ವಾಮಿ, ಕೆಲವೊಂದು ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸೇರಿ ಕರ್ನಾಟಕವನ್ನೇ ಲೂಟಿ ಮಾಡಿದ್ದರು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ.

ಮೂಡಿಗೆರೆಯಿಂದ ಜೆಡಿಎಸ್‌ ಟಿಕೆಟ್‌ ಪಡೆದಿರುವ ಕುಮಾರಸ್ವಾಮಿ, ಇನ್ನು ಮುಂದೆ ಬಿಜೆಪಿಯಲ್ಲಿ ಹಲವು ನಾಯಕರು ಇರುವುದಿಲ್ಲ ಎಂದಿದ್ದಾರೆ. ಗೌರವಾನ್ವಿತ ರಾಜಕಾರಣಿ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಇವತ್ತು ಎಲ್ಲಿದ್ದಾರೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಒಂದು ರೀತಿಯ ಐಪಿಎಲ್‌ ಸರ್ಕಾರದಂತಿತ್ತು ಎಂದು ಹೇಳಿದ್ದಾರೆ.

ಹೆಚ್ಚಿನ ಸುದ್ದಿ