Monday, October 13, 2025
Homeಜಿಲ್ಲಾ ಸುದ್ದಿಗಳುಕುರಿಗಾಹಿಗಳ ಹಿತರಕ್ಷಣೆಗೆ ಕಾಯ್ದೆ ಕರಡು ಸಿದ್ದ: ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಅಧಿವೇಶನದಲ್ಲಿ ಮಂಡನೆ:...

ಕುರಿಗಾಹಿಗಳ ಹಿತರಕ್ಷಣೆಗೆ ಕಾಯ್ದೆ ಕರಡು ಸಿದ್ದ: ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಅಧಿವೇಶನದಲ್ಲಿ ಮಂಡನೆ: ಸಚಿವ ಕೆ. ವೆಂಕಟೇಶ್‌

ಬೆಂಗಳೂರು, ಆಗಸ್ಟ್‌ 18:-
ರಾಜ್ಯದ ಕುರಿಗಾಹಿಗಳ ಹಿತರಕ್ಷಣೆಗೆ ಸರ್ಕಾರ ಬದ್ದವಾಗಿದೆ. ಈಗಾಗಲೇ ಕುರಿಗಾರರ ದೌರ್ಜನ್ಯ ತಡೆ ಕಾಯ್ದೆಯ ಕರಡು ಸಿದ್ದವಾಗಿದ್ದು ಮುಂದಿನ ಸಚಿವ ಸಂಪುಟದಲ್ಲಿ (ಆಗಸ್ಟ್‌ 19, 2025) ಒಪ್ಪಿಗೆ ಪಡೆದು, ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಪಶುವೈದ್ಯಕೀಯ ಸಚಿವ ಕೆ.ವೆಂಕಟೇಶ್‌ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕಾಯ್ದೆಯ ಜಾರಿಗೆ ಬದ್ದತೆಯನ್ನು ವ್ಯಕ್ತಪಡಿಸಿದ್ದಾರೆ. ಕುರಿಗಾರರ ಸ್ವತ್ತುಗಳ ರಕ್ಷಣೆ, ಪರಿಹಾರ ಯೋಜನೆಗಳು, ವೈದ್ಯರ ನೇಮಕಾತಿ, ಪೊಲೀಸ್‌ ರಕ್ಷಣೆಗಾಗಿ ಕರ್ನಾಟಕ ಸಾಂಪ್ರದಾಯಿಕ ವಲಸೆ ಕುರಿಗಾಹಿಗಳ (ಕಲ್ಯಾಣ ಕ್ರಮಗಳು ಮತ್ತು ದೌರ್ಜನ್ಯ ತಡೆ) ಮಸೂದೆ 2025ರ ಕರಡನ್ನು ಸಿದ್ದಪಡಿಸಲಾಗಿದೆ. ಇದಕ್ಕೆ ಕಾನೂನು ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕರಡು ವಿಧೇಯಕಕ್ಕೆ ಅನುಮತಿ ಪಡೆದುಕೊಳ್ಳಲಾಗುವುದು. ಅನುಮತಿಯ ನಂತರ ಈ ಬಾರಿಯ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ಸಚಿವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ