ಬೆಂಗಳೂರು: ಭಾರತೀಯ ಚುನಾವಣಾ ಆಯೋಗದಿಂದ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಗಳಿಸಿರುವ ಆಮ್ ಆದ್ಮಿ ಪಕ್ಷ ತನ್ನ ಅಭ್ಯರ್ಥಿಗಳ ಆಯ್ಕೆಯ ವಿವರವನ್ನು ಹಂಚಿಕೊಂಡಿದೆ.
ಸಾಮಾನ್ಯವಾಗಿ ಎಲ್ಲ ಪಕ್ಷಗಳು ರಾಜಕೀಯದಲ್ಲಿ ಪಳಗಿರುವವರಿಗೆ ಟಿಕೆಟ್ ನೀಡುತ್ತದೆ. ಆದರೆ ಆಮ್ ಆದ್ಮಿ ಪಕ್ಷ ಆಯ್ಕೆ ಮಾಡಿರುವ 168 ಅಭ್ಯರ್ಥಿಗಳ ಪಟ್ಟಿ ಗಮನಿಸಿದರೆ ಕೊಂಚ ವಿಭಿನ್ನವಾಗಿದೆ. 168 ಅಭ್ಯರ್ಥಿಗಳ ಪೈಕಿ , 16 ರೈತರು, 13 ಮಹಿಳೆಯರು, 18 ವಕೀಲರು, 10 ವೈದ್ಯರು, 10 ಇಂಜಿನಿಯರ್, 15 ಡಾಕ್ಟರೇಟ್ ಅಭ್ಯರ್ಥಿಗಳು, 41 ಸ್ನಾತಕೋತ್ತರ ಪದವಿ, 82 ಪದವಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿಯೇ ಮೊದಲ ಗೆಲುವು ಸಾಧಿಸಿರುವ ಆಪ್ ರಾಜ್ಯ ವಿದಾನಸಭಾ ಚುನಾವಣೆಯಲ್ಲಿಯೂ ವಿಜಯ ಸಾಧಿಸುವ ವಿಶ್ವಾಸದಲ್ಲಿದೆ.
ದೆಹಲಿ ಮತ್ತು ಪಂಜಾಬ್‌ನಲ್ಲಿ ದೊಡ್ಡ ಬಹುಮತ ಮತ್ತು ಅತಿ ದೊಡ್ಡ ಮತ ಹಂಚಿಕೆಗಳೊಂದಿಗೆ ಎಎಪಿ ಅಧಿಕಾರದಲ್ಲಿದೆ. ಕಳೆದ ವರ್ಷ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಐದು ಸ್ಥಾನಗಳನ್ನು ಗೆದ್ದಿತ್ತು.ಇದೀಗ ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧವಾಗಿದೆ ನಿಂತಿದೆ.