Monday, October 13, 2025
Homeಚುನಾವಣೆ 2023ಚಿಲ್ಲರೆ ನಾಣ್ಯಗಳಲ್ಲಿ ಎಲೆಕ್ಷನ್ ಠೇವಣಿ ಪಾವತಿ: ಆಮ್‌ ಆದ್ಮಿ ಅಭ್ಯರ್ಥಿ ವಿಶೇಷತೆ

ಚಿಲ್ಲರೆ ನಾಣ್ಯಗಳಲ್ಲಿ ಎಲೆಕ್ಷನ್ ಠೇವಣಿ ಪಾವತಿ: ಆಮ್‌ ಆದ್ಮಿ ಅಭ್ಯರ್ಥಿ ವಿಶೇಷತೆ

ಹಾವೇರಿ : ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಅಭ್ಯರ್ಥಿಯೋರ್ವರು ನಾಣ್ಯಗಳ ಮೂಲಕ ಚುನಾವಣಾ ಠೇವಣಿ ಹಣ ಪಾವತಿಸಿರುವ ಘಟನೆ ಹಾವೇರಿಯ ರಾಣೇಬೆನ್ನೂರಿನಲ್ಲಿ ನಡೆದಿದೆ. ರಾಣೆಬೆನ್ನೂರು ಕ್ಷೇತ್ರದಲ್ಲಿ ಆಮ್​ ಆದ್ಮಿ ಪಕ್ಷದಿಂದ ಸ್ಫರ್ಧಿಸುತ್ತಿರುವ ಹನುಮಂತಪ್ಪ ಕಬ್ಬಾರ ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ಚುನಾವಣಾಧಿಕಾರಿಗಳಿಗೆ 10 ಸಾವಿರ ರೂಪಾಯಿ ಠೇವಣಿ ಹಣವನ್ನು ಚಿಲ್ಲರೆ ನಾಣ್ಯಗಳನ್ನೇ ನೀಡಿದ್ದಾರೆ

ಈ ನಾಣ್ಯಗಳನ್ನು ಎಣಿಸಲು ಮುಂದಾದ ಚುನಾವಣಾಧಿಕಾರಿ ಒಬ್ಬರೇ ಎಣಿಸಲಾರದೇ ಸಿಬ್ಬಂದಿಯನ್ನು ಕರೆಸಿ ನಾಣ್ಯ ಎಣಿಸಬೇಕಾಯ್ತು. ಆದರೂ ಎಣಿಕೆ ಮುಗಿಯದ ಕಾರಣ ಅಭ್ಯರ್ಥಿ ಹನುಮಂತಪ್ಪ ಕಬ್ಬಾರ್‌ಗೆ ನಾಮಪತ್ರ ಸಲ್ಲಿಸಲು ಅನುಮತಿ ನೀಡಿದ ಚುನಾವಣಾಧಿಕಾರಿಗಳು ಹಣದ ರಶೀದಿ ನೀಡಿ ಕಳುಹಿಸಿದ್ರು ನಂತರ ಬ್ಯಾಂಕ್ ಸಿಬ್ಬಂದಿಯನ್ನು ಕರೆಸಿ ಹಣ ಎಣಿಸಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.

ಹೆಚ್ಚಿನ ಸುದ್ದಿ