ಬೆಂಗಳೂರು: ಆಮ್ ಆದ್ಮಿ ಪಕ್ಷ ಮಂಗಳವಾರ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿ ತನ್ನ ನಾಲ್ಕನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. 45 ಮಂದಿ ನಾಲ್ಕನೇ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇದುವರೆಗೂ ೧೬೮ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ
ಒಟ್ಟಾರೆ ಆಪ್ ಪಟ್ಟಿಯಲ್ಲಿ 16 ಮಂದಿ ರೈತರು, 13 ಮಹಿಳೆಯರು, 18 ವಕೀಲರು, 10 ವೈದ್ಯರು, 10 ಇಂಜಿನಿಯರ್‌ಗಳು, 10 ಡಾಕ್ಟರೇಟ್ ಪದವೀಧರರು, 41 ಸ್ನಾತಕೋತ್ತರ ಪದವೀಧರರು, 82 ಮಂದಿ ಪದವೀಧರರು ಇದ್ದಾರೆಂದು ಪಕ್ಷದ ಮಾಧ್ಯಮ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ತಿಳಿಸಿದ್ದಾರೆ.