Sunday, October 12, 2025
Homeಟಾಪ್ ನ್ಯೂಸ್ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯ-ಅಭಿಷೇಕ್ ಪುತ್ರಿ ಆರಾಧ್ಯ

ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯ-ಅಭಿಷೇಕ್ ಪುತ್ರಿ ಆರಾಧ್ಯ

ನವದೆಹಲಿ: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಂಪತಿಯ ಪುತ್ರಿ ಮತ್ತು ಆರಾಧ್ಯ ಬಚ್ಚನ್ ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಮಾನ ನಡೆದಿದೆ. ಪ್ರಕರಣದ ವಿಚಾರಣೆ ಎಪ್ರಿಲ್ 20ರಂದು ನಡೆಯಲಿದೆ.

ಯೂಟ್ಯೂಬ್ ಚಾನಲ್ ಒಂದು ತನ್ನ ಆರೋಗ್ಯ, ಜೀವನದ ಬಗ್ಗೆ ತಪ್ಪು ಮಾಹಿತಿ, ಸುದ್ದಿಗಳನ್ನು ಹರಡುತ್ತಿದೆ. ಇಂತಹ ಸುದ್ದಿಗಳಿಗೆ ತಡೆಯಾಜ್ಞೆ ನೀಡುವಂತೆ ಆರಾಧ್ಯ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.

ನಟ ನಟಿಯರ ಬಗ್ಗೆ ಸುಳ್ಳು ಸುದ್ದಿ ಹರಡುತ್ತಾ ಹಲವು ಯೂಟ್ಯೂಬ್ ಚಾನಲ್ ಗಳು ಕಾರ್ಯಾಚರಿಸುತ್ತಿವೆ. ಆಕರ್ಷಕ ತಂಬ್ ನೇಲ್, ವಿಡಿಯೊ ಮೂಲಕ ಸುಳ್ಳು ಹರಡಲಾಗುತ್ತಿದೆ. ಇಂತಹದ್ದೇ ಚಾನೆಲ್ ಒಂದು ಆರಾಧ್ಯ ಬಗ್ಗೆ ಇಂತಹ ಸುಳ್ಳು ಹರಡಿದೆ ಎನ್ನಲಾಗಿದೆ.

ಹೆಚ್ಚಿನ ಸುದ್ದಿ