ರಾಹುಲ್ ಗಾಂಧಿ ಅನರ್ಹತೆ ವಿಚಾರವಾಗಿ ಇಂದು ನವದೆಹಲಿಯಲ್ಲಿ ಎಐಸಿಸಿ ಸಭೆ ಕರೆದಿದೆ. ದೇಶದುದ್ದಗಲಕ್ಕೂ ಹೋರಾಟದ ರೂಪುರೇಷೆ ನಿರ್ಧರಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಭೆ ಕರೆದಿದ್ದಾರೆ. ರಾಹುಲ್ ಗಾಂಧಿ ಅನರ್ಹತೆ ಆದೇಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ನಾಯಕರು ಡೆಮಾಕ್ರಸಿ ಇನ್ ಡೇಂಜರ್ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ್ರು.. ದೆಹಲಿಯ ವಿಜಯ್ ಚೌಕ್‌ನಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು.
ಇಂದು ಸಂಜೆ 5:30 ಕ್ಕೆ ನಡೆಯಲಿರುವ ಸಭೆಯಲ್ಲಿ ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಮತ್ತು ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ. ಇನ್ನು ಲೋಕಸಭಾ ಸದಸ್ಯತ್ವದಿಂದ ರಾಹುಲ್ ಗಾಂಧಿಯವರನ್ನು ಅನರ್ಹಗೊಳಿಸಿರೋದನ್ನು ರಾಜ್ಯ ನಾಯಕರು ಖಂಡಿಸಿದ್ದಾರೆ.
ರಾಹುಲ್ ಗಾಂಧಿ ಅನರ್ಹತ್ವ ಕುರಿತು ಚರ್ಚೆ ನಡೆಸಲು ಪ್ರಮುಖ ನಾಯಕರನ್ನು ಕಾಂಗ್ರೆಸ್ ಕಚೇರಿಗೆ ಆಮಂತ್ರಿಸಲಾಗಿದ್ದು,
ಪ್ರತಿಪಕ್ಷಗಳ 12 ಮಂದಿ ಸದಸ್ಯರು ಇಂದು ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ. ರಾಹುಲ್ ಗಾಂಧಿ ಇಂದು ಲೋಕಸಭೆಗೆ ಹಾಜರಾಗಿದ್ದರು. ಆದರೆ ಸದನ ಅಪರಾಹ್ನದವರೆಗೂ ಮುಂದೂಡಲ್ಪಟ್ಟಿತು. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಿದ್ದ ಕಾರಣದಿಂದಾಗಿ ರಾಹುಲ್ ಗಾಂಧಿ ಸದನದಿಂದ ತೆರಳಿದ್ದಾರೆ.
ಇದು ಕೇವಲ ಕಾನೂನಾತ್ಮಕ ಸಮಸ್ಯೆಯಲ್ಲ. ಇದು ಭವಿಷ್ಯಕ್ಕೆ ಸಂಬಂಧಿಸಿದ ರಾಜಕಾರಣದ ಸಮಸ್ಯೆ. ಮೋದಿ ಸರ್ಕಾರ ಹೇಗೆ ಪ್ರತೀಕಾರ, ಬೆದರಿಕೆ ದಬ್ಬಾಳಿಕೆ ಮೂಲಕ ರಾಜಕಾರಣ ನಡೆಸುತ್ತಿದೆ ಎಂಬುದಕ್ಕೆ ಶ್ರೇಷ್ಠ ಉದಾಹರಣೆಯಾಗಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.
