ನವದೆಹಲಿ: ಭಾರತಕ್ಕೆ ಆಗಮಿಸಿರುವ ಅಮೆರಿಕದ ನೂತನ ರಾಯಭಾರಿ ಎರಿಕ್ ಗಾರ್ಸೆಟ್ಟಿ, ದೆಹಲಿ ರಾಯಭಾರ ಕಚೇರಿಗೆ ಆಟೋದಲ್ಲಿ ತೆರಳಿದ್ದಾರೆ.
ಉಭಯ ರಾಷ್ಟ್ರಗಳ ಸಂಬಂಡವನ್ನು ಬಲಪಡಿಸುವ ನಿಟ್ಟಿನಲ್ಲಿ ಅಮೆರಿಕದ ನೂತನ ರಾಯಭಾರಿ ಎರಿಕ್ ಗಾರ್ಸೆಟ್ಟಿ ಭಾರತಕ್ಕೆ ಆಗಮಿಸಿದ್ದಾರೆ. ಗುಲಾಬಿ ಬಣ್ಣದ ಆಟೋವೊಂದರಲ್ಲಿ ದೆಹಲಿಯ ರಾಯಭಾರ ಕಚೇರಿಗೆ ತೆರಳಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅಮೆರಿಕ ರಾಯಭಾರ ಕಚೇರಿ, ನೂತನ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರನ್ನು ಭಾರತ ಉತ್ಸಾಹದಿಂದ ಸ್ವಾಗತಿಸಿದೆ. ಭಾರತದ ವೈವಿಧ್ಯತೆಯನ್ನು ಅಲ್ಲಿನ ರಾಜ್ಯಗಳು ತೋರಿಸುತ್ತವೆ. ಸಂಸ್ಕ್ರತಿ, ಇತಿಹಾಸ ಹೊಂದಿರುವ ಶ್ರೀಮಂತ ರಾಷ್ಟ್ರ ಭಾರತ. #IncredibleIndia ಎಂದು ಬರೆದುಕೊಂಡಿದೆ.
