Tuesday, October 7, 2025
Homeಟಾಪ್ ನ್ಯೂಸ್ಯಡಿಯೂರಪ್ಪ ನಿವಾಸದಲ್ಲಿ ಅಮಿತ್ ಶಾ- ಚುರುಕಾದ ರಾಜಕೀಯ ಚಟುವಟಿಕೆ

ಯಡಿಯೂರಪ್ಪ ನಿವಾಸದಲ್ಲಿ ಅಮಿತ್ ಶಾ- ಚುರುಕಾದ ರಾಜಕೀಯ ಚಟುವಟಿಕೆ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಯಡಿಯೂರಪ್ಪ ಆಮಂತ್ರಣದಂತೆ ಅಮಿತ್ ಶಾ ಯಡಿಯೂರಪ್ಪ ನಿವಾಸಕ್ಕೆ ಉಪಹಾರಕ್ಕಾಗಿ ತೆರಳಿದ್ರು.. ಮೇಲ್ನೋಟಕ್ಕೆ ಇದೊಂದು ಸೌಜನ್ಯಯುತ ಭೇಟಿಯಂತೆ ಕಂಡು ಬಂದರೂ ಹಲವು ರಾಜಕೀಯ ಲೆಕ್ಕಾಚಾರಗಳು ಇಂದು ಚರ್ಚೆಯಾಗಿದೆ ಎನ್ನಲಾಗಿದೆ.


ಒಂದೆಡೆ ಟಿಕೆಟ್ ಆಕಾಂಕ್ಷಿಗಳ ದಂಡು ಹೆಚ್ಚಾಗುತ್ತಿದ್ದಂತೆಯೇ ಚುನಾವಣಾ ಕಣವೂ ಸಹ ರಂಗೇರುತ್ತಿದೆ. ಇಂಥಾ ಸಮಯದಲ್ಲಿ ರಾಜ್ಯದಲ್ಲಿ ಬಿಜೆಪಿ ಪ್ರಮುಖ ನಾಯಕರಾಗಿರುವ ಬಿ.ಎಸ್. ಯಡಿಯೂರಪ್ಪ ಅವರನ್ನು ಅಸಮಾಧಾನಗೊಳಿಸುವುದು ಹೈಕಮ್ಯಾಂಡ್‍ಗೆ ಇಷ್ಟವಿಲ್ಲ ಎನ್ನಲಾಗಿದೆ. ಹೀಗಾಗಿ ಬಹುಮುಖ್ಯ ಚರ್ಚೆಯನ್ನು ಯಡಿಯೂರಪ್ಪ ಸಮ್ಮುಖದಲ್ಲೇ ನಡೆಸಬೇಕೆಂದು ಅವರ ನಿವಾಸಕ್ಕೆ ಭೇಟಿ ನೀಡಿದ್ದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಪ್ರಮುಖ ನಾಯಕರು ಯಡಿಯೂರಪ್ಪ ನಿವಾಸದಲ್ಲೇ ಚರ್ಚೆಯಲ್ಲಿ ಪಾಲ್ಗೊಂಡಿದ್ರು

ಲಿಂಗಾಯತ ಸಮುದಾದ ಬಹುಮುಖ್ಯ ನಾಯಕರಾಗಿರುವ ಯಡಿಯೂರಪ್ಪರನ್ನು ಸಂತುಚ್ಟವಾಗಿಟ್ಟುಕೊಂಡ್ರೆ ಲಿಂಗಾಯತ ಮತಬ್ಯಾಂಕ್ ಭದ್ರವಾಗಿರುತ್ತೆ ಅನ್ನದು ಬಿಜೆಪಿಗೆ ಗೊತ್ತಿರದ ವಿಚಾರವೇನಲ್ಲ. ರಾಜ್ಯದಲ್ಲಿ ಚುನಾವಣೆ ಎದುರಿಸಲು ಯಡಿಯೂರಪ್ಪ ಅನಿವಾರ್ಯವಾದ್ದರಿಂದ ಖುದ್ದು ಅಮಿತ್ ಶಾ ಇಂದು ಯಡಿಯೂರಪ್ಪ ಮನೆಗೆ ಭೆಟಿ ನೀಡಿದ್ದಾರೆ.

ಅಮಿತ್ ಶಾಗೆ ಉಪಾಹಾರ ಬಡಿಸುತ್ತಿರವ ಬಿ.ವೈ. ವಿಜಯೇಂದ್ರ


ಸೋಮಣ್ಣ ಪಕ್ಷಾಂತರ ಸಂಭವನೀಯತೆ, ರಾಜ್ಯದಲ್ಲಿ ಪಕ್ಷ ಸಂಘಟನೆ ಸೇರಿದಂತೆ ಹಲವು ಪ್ರಮುಖ ವಿಷಯಗಳು ಚರ್ಚೆಯಲ್ಲಿ ಮುನ್ನೆಲೆಗೆ ಬರುವ ಸಾಧ್ಯತೆಯಿದೆ. ಜೊತೆಗೆ ಟಿಕೆಟ್ ಹಂಚಿಕೆ ವಿಷಯ, ಪಂಚಮಸಾಲಿ ಮೀಸಲಾತಿ ವಿವಾದ ಎಲ್ಲವೂ ಗೃಹಸಚಿವರ ಸಮ್ಮುಖದಲ್ಲಿ ಇತ್ಯರ್ಥಗೊಳ್ಳಲಿವೆ.

ಹೆಚ್ಚಿನ ಸುದ್ದಿ