Wednesday, October 8, 2025
Homeದೇಶಡ್ಯಾನ್ಸರ್ ವರುಣ್ ದಾಗರ್ ಗೆ ಥಳಿಸಿದ ಪೊಲೀಸರು: ಆರೋಪ

ಡ್ಯಾನ್ಸರ್ ವರುಣ್ ದಾಗರ್ ಗೆ ಥಳಿಸಿದ ಪೊಲೀಸರು: ಆರೋಪ

ನವದೆಹಲಿ: ಜನಪ್ರಿಯ ರಿಯಾಲಿಟಿ ಶೋ ‘ಇಂಡಿಯಾಸ್ ಬೆಸ್ಟ್ ಡ್ಯಾನ್ಸರ್’ನ ಸ್ಪರ್ಧೆಗಳಲ್ಲಿ ಒಬ್ಬರಾಗಿದ್ದ ವರುಣ್ ದಾಗರ್ ಅವರಿಗೆ ಪೊಲೀಸರು ಥಳಿಸುತ್ತಿರುವ ಎನ್ನಲಾದ ವಿಡಿಯೊ ವೈರಲ್ ಆಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವರುಣ್, ದೆಹಲಿ ಪೊಲೀಸ್ ಅಧಿಕಾರಿಗಳು ಮತ್ತು ಪಾರ್ಕಿಂಗ್ ಮ್ಯಾನೇಜರ್‌ಗಳು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ವಿಡಿಯೊ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಹಲವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.

ನಟ ರಾಜೇಶ್ ತೈಲಾಂಗ್ ” ದೆಹಲಿ ನಿವಾಸಿಯಾಗಿದ್ದಕ್ಕೆ ನಾಚಿಕೆಪಡುತ್ತೇನೆ” ಎಂದಿದ್ದಾರೆ.

ಪೊಲೀಸರ ಸಮವಸ್ತ್ರದಲ್ಲಿದ್ದವರು ವರುಣ್, ಅವರನ್ಜು ತಳ್ಳುವುದು ಮತ್ತು ಹೊಡೆಯುವು ವಿಡಿಯೊದಲ್ಲಿ ಕಾಣಿಸುತ್ತದೆ.

ಹೆಚ್ಚಿನ ಸುದ್ದಿ