ಯಾದಗಿರಿ: ಗುರುಮಿಠಕಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಆಸ್ಪತ್ರೆಯಿಂದಲೇ ತಮ್ಮ ಮತದಾರರಿಗೆ ಮನವಿ ಮಾಡಿದ್ದಾರೆ. ಏ. 15 ರಂದು ಅಪಘಾತದಲ್ಲಿ ಗಾಯಗೊಂಡಿದ್ದ ಚಿಂಚನಸೂರ್ ಆಸ್ಪತ್ರೆಗೆ ದಾಖಲಾಗಿದ್ದರು. ಕಲಬುರಗಿಯ ಯುನೈಟೆಡ್ ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡೇ ಬಾಬುರಾವ್ ಕೈ ಮುಗಿದು ಮತಯಾಚಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಶಂಸಿಸಿರುವ ಚಿಂಚನಸೂರ್ ತಮಗೆ ಟಿಕೆಟ್ ಕೊಟ್ಟಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಮತದಾರರ ಜೊತೆ ಮನದಾಳದ ಮಾತು ಹಂಚಿಕೊಂಡಿರುವ ಬಾಬುರಾವ್, ಈ ಶರೀರ ಇಂದೋ ನಾಳೆಯೋ ಬಿದ್ದು ಹೋಗುವಂಥದ್ದು. ಜನರ ಸೇವೆ ಮಾಡಿಯೇ ಈ ಆಯಸ್ಸನ್ನು ಕಳೆಯಬೇಕೆಂದು ನಿರ್ಧರಿಸಿದ್ದೇನೆ. ಹೀಗಾಗಿ ತಮಗೆ ಮತನೀಡಬೇಕೆಂದು ಮತದಾರರ ಪಾದಕಮಲಗಳಲ್ಲಿ ನಮಸ್ಕರಿಸುತ್ತೇನೆಂದು ಚಿಂಚನಸೂರ್ ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ.