Monday, March 2, 2026
Homeಚುನಾವಣೆ 2023ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತೀನಿ - ಅನಿಲ್ ಲಾಡ್

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡ್ತೀನಿ – ಅನಿಲ್ ಲಾಡ್

ನಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ, ಬಂಡಾಯ ಅಭ್ಯರ್ಥಿಯಾಗಿ ನಿಲ್ಲುತ್ತೇನೆ. ಚುನಾವಣೆ ಆಗುವವರೆಗೆ ಕರೆ ಬಟ್ಟೆ ಉಟ್ಟು ಪ್ರತಿಭಟನೆ ಮಾಡುತ್ತೇನೆ ಅನಿಲ್ ಲಾಡ್ ಅಸಮಾಧಾನ ವ್ಯಕ್ತಪಡಿಸಿದರು.
ಸಮೀಕ್ಷೆ ಮಾಡಿದ್ದೀರಾ, ಕುಕ್ಕರ್ ಕೊಟ್ರು ಅಂತ ಟಿಕೆಟ್ ಕೊಟ್ಟಿದ್ದೀರಾ, ವೀಕ್ಷಕನ್ನು ಕರೆಸಿ ಸಮೀಕ್ಷೆ ಮಾಡಿದ್ದೀರಾ‌ ಎಂದು ಕಾಂಗ್ರೆಸ್ ಪಕ್ಷವನ್ನು ಲಾಡ್ ಪ್ರಶ್ನಿಸಿದ್ದಾರೆ.ನ.1 2022ರಂದು ಪಾರ್ಲಿಮೆಂಟನಲ್ಲಿ ಸೋನಿಯಾ ಗಾಂಧಿ ಭೇಟಿ ಮಾಡಿದಾಗ ನೀನೇ ಅಭ್ಯರ್ಥಿ ಎಂದು ಹೇಳಿದ್ದರು. 25 ಸಾವಿರ ಅಂತರದಿಂದ ಸೋತ ಸಂತೋಷ ಲಾಡ್ ಟಿಕೆಟ್ ಕೊಟ್ಟಿದ್ದಾರೆ.
ನಾನು ಕೇವಲ 15 ಸಾವಿರದಿಂದ ಸೋತಿದ್ದೇನೆ ನನಗ್ಯಾಕೆ ನೀಡುತ್ತಿಲ್ಲ. ಸೋನಿಯಾಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಟಿಕೆಟ್ಗೆ ಮನವಿ ಮಾಡಿದ್ದೆ ಎಂದರು.
ಭರತ್ ರೆಡ್ಡಿ ಹೆಸರು ಘೋಷಣೆ ಮಾಡಿದ್ದಾರೆ. ನಾನು ಮುಖಂಡರನ್ನು ಕಾಣಲಿಕ್ಕೆ ಪ್ರಯತ್ನ ಪಟ್ಟಿದ್ದೇನೆ. ನ್ಯಾಯಕ್ಕಾಗಿ ಮಾಧ್ಯಮಗಳ ಮುಂದೆ ಬಂದಿದ್ದೇನೆ. ಯಾವ ಮಾನದಂಡದ ಮೂಲಕ ಬಳ್ಳಾರಿ ಟಿಕೆಟ್ ಹಂಚಿಕೆ ಮಾಡಿದ್ದೀರಾ? ಗೋಪಾಲಕೃಷ್ಣ ಮತ್ತು ಗವಿಯಪ್ಪ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ಘೋಷಣೆ ಮಾಡುತ್ತೀರಾ. ಪಕ್ಷದಿಂದ ಮರ್ಡರ್ ಆಗಿದ್ದೇವೆ, ಜನರು ಉಳಿಸುತ್ತೀರಾ ಮರ್ಡರ್ ಮಾಡ್ತಾರಾ ನೋಡಬೇಕು? ಮೇಡಂ ಕರೆಸಿದರೆ ಹೋಗುತ್ತೇನೆ, ನಮ್ಮ ಜೊತೆಗೆ ಯಾರೇ ಬಂದರೂ ಅವರನ್ನು ಸ್ವಾಗತ ಮಾಡುತ್ತೇನೆ ಎಂದರು.

ಹೆಚ್ಚಿನ ಸುದ್ದಿ