ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಎಂ. ಪಿ. ಲತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ವೇಳೆ ಲಘು ಲಾಠಿ ಪ್ರಹಾರ ಉಂಟಾಯಿತು.
ಅತ್ಯಧಿಕ ಬೆಂಬಲಿಗರ ಸಮ್ಮುಖದಲ್ಲಿ ಮೆರವಣಿಗೆ ಕೈಗೊಂಡು ನಾಮಪತ್ರ ಸಲ್ಲಿಸಲು ಎಂ.ಪಿ ಲತಾ ಅವರು ಕಚೇರಿಗೆ ಆಗಮಿಸುವ ವೇಳೆ ಬೆಂಬಲಿಗರು ನೂಕಾಟ ನಡೆಸಿದರು. ಈ ವೇಳೆ ಪೊಲೀಸ್ ಸಿಬ್ಬಂದಿ ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಬೆಂಬಲ ಸೂಚಿಸಲು ಅಭ್ಯರ್ಥಿ ಜೊತೆ ಬಂದಿದ್ದ ಸಾವಿರಾರು ಬೆಂಬಲಿಗರ ನಡುವಲ್ಲೇ ನೂಕುನುಗ್ಗಲು ಏರ್ಪಾಡಾಗಿತ್ತು. ಹೀಗಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಬಳಿಕ ಪರಿಸ್ಥಿತಿ ಹತೋಟಿಗೆ ತರುವಲ್ಲಿ ಪೊಲೀಸರು ಯಶಸ್ವಿಯಾದರು.