ಬೆಂಗಳೂರು: ಜೆಡಿಎಸ್ ಪಕ್ಷ ಚುನಾವಣಾ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ ಹಾಸನ ಟಿಕೆಟ್ ಘೋಷಣೆಯಾಗಿದ್ದು ಭವಾನಿ ರೇವಣ್ಣಗೆ ಟಿಕೆಟ್ ಕೈತಪ್ಪಿದೆ
ಜೆಡಿಎಸ್ ಪಾಲಿಗೆ ಹಾಗೂ ದೇವೇಗೌಡರ ಕುಟುಂಬದ ಪಾಲಿಗೆ ತಲೆಬಿಸಿಯಾಗಿದ್ದ ಹಾಸನ ಕ್ಷೇತ್ರದ ಟಿಕೆಟ್ ಕೊನೆಗೆ ಹೆಚ್.ಪಿ ಸ್ವರೂಪ್ ಪಾಲಾಗಿದೆ. ಹಾಸನ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಭವಾನಿ ರೇವಣ್ಣ ಟಿಕಟ್ ಪಡೆಯಲು ಇನ್ನಿಲ್ಲದ ಕಸರತ್ತು ಮಾಡಿದ್ರು. ರೇವಣ್ಣ ಕೂಡಾ ಭವಾನಿಗೆ ಟಿಕೆಟ್ ನೀಡದಿದ್ರೆ ತನಗೂ ಹೊಳೆನರಸೀಪುರ ಟಿಕೆಟ್ ಬೇಡವೆಂದು ಹೇಳಿಕೆ ನೀಡಿದ್ರು.. ಆದರೆ ಇದಾವುದಕ್ಕೂ ಸೊಪ್ಪು ಹಾಕದ ಕುಮಾರಸ್ವಾಮಿ ಹೆಚ್.ಪಿ ಸ್ವರೂಪ್ಗೆ ಟಿಕೆಟ್ ನೀಡಿದ್ದಾರೆ
