ಚುನಾಣೆ ಹತ್ತಿರ ಬಂತು ಅಂದ್ರೆ ಸಾಕು ಭ್ರಷ್ಟಾಚಾರ ಹರಗಣಗಳ ಆರೋಪಗಳ ಸುರಿಮಳೆಯೇ ವಿಪಕ್ಷಗಳಿಂದ ಬರಲಾರಂಭಿಸುತ್ತದೆ. ಇದೀಗ ಕಾಂಗ್ರೆಸ್ ಪಕ್ಷ ಬಿಜೆಪಿಯ ಹಗರಣಗಳು, 40% ಕಮಿಷನ್ ದಂಧೆ, ಕೋಮುವಾದ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿರು ಬಿಜೆಪಿ ಸರ್ಕಾರ ಬದಲಾಯಿಸುವ ಸಮಯ ಬಂದಿದೆ. ಈ ಕಮಿಷನ್ ಸರ್ಕಾರವನ್ನು ಕಿತ್ತೊಗೆಯಿರಿ. ಜನಪರ ಸರ್ಕಾರಕ್ಕೆ ಅಧಿಕಾರ ನೀಡಿ ಎಂಬುದನ್ನು ಬಿಂಬಿಸುವ ವಿಡಿಯೋ ಸಾಂಗ್ ರಿಲೀಸ್ ಮಾಡಿದೆ.
ಇದು 40% ಕಮಿಷನ್ ಸರ್ಕಾರ, ಪಿಎಸ್ಐ ಹಗರಣ, ಮೊಟ್ಟೆ ಹಗರಣ, ಬಿಡಿಎ ಹಗರಣ, ಕೋವಿಡ್ ಹಗರಣ ಹಾಗೂ ಇನ್ನಿತರ ಅನೇಕ ಹಗರಣಗಳ ಬಗ್ಗೆ ಹಾಡಿನಲ್ಲಿ ಬಿತ್ತರಿಸಲಾಗಿದೆ.