ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಕೊನೆಗೂ 189 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಮೊದಲ ಪಟ್ಟಿಯಲ್ಲಿ 8 ಜನ ಹಾಲಿ ಶಾಸಕರಿಗೆ ಕೋಕ್ ನೀಡಲಾಗಿದೆ.
ಪುತ್ತೂರು ಕ್ಷೇತ್ರದ ಸಂಜೀವ ಮಠಂದೂರು, ಕಾಪು ಕ್ಷೇತ್ರದ ಲಾಲಾಜಿ ಮೆಂಡನ್ ಗೆ ಟಿಕೆಟ್ ನಿರಾಕರಿಸಲಾಗಿದೆ. ಉಡುಪಿ ಕ್ಷೇತ್ರದ ರಘುಪತಿ ಭಟ್ ರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಅವರ ಬದಲಾಗಿ, ಹಿಜಾಬ್ ವಿರೋಧಿ ಹೋರಾಟದಲ್ಲಿ ಮುಂಚೂಣಿಗೆ ಬಂದಿದ್ದ ಯಶ್‌ಪಾಲ್ ಗೆ ಟಿಕೆಟ್ ನೀಡಲಾಗಿದೆ.
ಮೀನುಗಾರಿಕಾ ಸಚಿವರಾಗಿರುವ, 6 ಬಾರಿ ಶಾಸಕರಾಗಿರುವ ಸುಳ್ಯ ಕ್ಷೇತ್ರದ ಎಸ್ ಅಂಗಾರ ಅವರಿಗೂ ಟಿಕೆಟ್ ನಿರಾಕರಿಸಲಾಗಿದೆ.
ಶಿರಹಟ್ಟಿ ಕ್ಷೇತ್ರದ ರಾಮಪ್ಪ ಲಮಾಣಿ, ರಾಮದುರ್ಗದ ಮಹದೇವಪ್ಪ ಯಾದವಾಡ, ಬೆಳಗಾವಿ ಉತ್ತರ ಕ್ಷೇತ್ರದ ಅನಿಲ್ ಎಸ್ ಬೆನಕೆ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಕ್ಷೇತ್ರದ ಗೂಳಿಹಟ್ಟಿ ಶೇಖರ್ ರಿಗೆ ಟಿಕೆಟ್ ನಿರಾಕರಿಸಲಾಗಿದೆ. ಬಿ.ಎಸ್ ಯಡಿಯೂರಪ್ಪನವರ ಶಿಕಾರಿಪುರದಲ್ಲಿ ಅವರ ಬದಲಿಗೆ ಅವರ ಪುತ್ರ ವಿಜಯೇಂದ್ರರಿಗೆ ಟಿಕೆಟ್ ಸಿಕ್ಕರೆ, ವಿಜಯನಗರದಲ್ಲಿ ಆನಂದ್ ಸಿಂಗ್ ಬದಲಿಗೆ ಅವರ ಪುತ್ರ ಸಿದ್ಧಾರ್ಥ್ ಸಿಂಗ್‌ಗೆ ಬಿಜೆಪಿ ಟಿಕೆಟ್ ನೀಡಿದೆ.
