ಬೆಂಗಳೂರು :ಕರ್ನಾಟಕದಲ್ಲೂ ಗುಜರಾತ್ ಮಾದರಿ ಅನುಸರಿಸಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಪಕ್ಷದ ಹಿರಿಯ ನಾಯಕರಿಗೆ ಹೈಕಮಾಂಡ್ ಕೊಕ್ ಕೊಟ್ಟಿದೆ. ಪಕ್ಷದ ಹಿರಿಯ ನಾಯಕರನ್ನು ಬಿಜೆಪಿ ಹೈಕಮಾಂಡ್ ಕೈ ಬಿಡುತ್ತಿದ್ದು, ಹೊಸ ತಲೆಮಾರಿನ ನಾಯಕರನ್ನು ಬೆಳೆಸಲು ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ ರಿಗೆ ಈ ಬಾರಿ ಟಿಕೆಟ್ ನೀಡಲಾಗುವುದಿಲ್ಲ ಎಂದಿರುವ ಬಿಜೆಪಿ ನಾಯಕರಿಗೆ ಮನೆ ದಾರಿ ಹಿಡಿಯುವಂತೆ ಸೂಚಿಸಿದೆ.
ಸಚಿವ ಸೋಮಣ್ಣ ಪುತ್ರನಿಗೆ ಟಿಕೆಟ್ ನೀಡಬೇಕಾದರೆ, ಸೋಮಣ್ಣ ನಿವೃತ್ತಿ ಘೋಷಿಸಬೇಕೆಂಬ ಷರತ್ತನ್ನು ಹೈಕಮಾಂಡ್ ಇಟ್ಟಿದೆ ಎಂದು ಪಕ್ಷದ ಮೂಲಗಳು ಹೇಳಿವೆ.
ರಾಜ್ಯ ವಿಧಾನಸಭೆಗೆ ದಿನಗಣನೆ ಇರುವಾಗ ಪಕ್ಷದ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಆಗಬಹುದಾದ ಮುಜುಗರ ತಪ್ಪಿಸಿಕೊಳ್ಳಲು ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿ ಪತ್ರವನ್ನೂ ಬರೆದಿದ್ದಾರೆ.
ಇದೆಲ್ಲದರ ಮುನ್ಸೂಚನೆಯಿದ್ದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದರು. ಇದರ ಹಿಂದೆಯೂ ಹಿರಿಯ ನಾಯಕರಿಗೆ ಛಾನ್ಸ್ ಇಲ್ಲ ಅನ್ನುವ ನಿರ್ಧಾರವೇ ಈ ಅನುಷ್ಠಾನಗೊಂಡಿದೆ ಎನ್ನಲಾಗಿದೆ.