ಬೆಂಗಳೂರು: ಟಿಕೆಟ್ ವಿಚಾರವಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದು, ಕಿಡಿನುಡಿಗಳನ್ನಾಡಿದ್ದಾರೆ. ಈ ಬಗ್ಗ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ನಿಂದ ಮೊದಲು ಸನ್ಮಾನ ಆಮೇಲೆ ಅವಮಾನ. ಮುಂದಿನ ದಿನಗಳಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಇದು ಅನುಭವವಾಗಲಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಂದಾಯ ಸಚಿವ ಆರ್. ಅಶೋಕ್, ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಪೂರ್ವ ನಿಯೋಜಿತವಾಗಿದೆ. ಅವರ ಮಕ್ಕಳಿಗೆ ಮತ್ತು ಪತ್ನಿಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿದರೂ ಒಪ್ಪದೇ ಹೋಗಿರುವುದು ನೋಡಿದರೆ ಮೊದಲೇ ಎಲ್ಲವನ್ನು ನಿರ್ಧಾರ ಹೋಗಿದ್ದಾರೆ ಎಂದು ಅನಿಸುತ್ತದೆ ಎಂದು ಹೇಳಿದ್ದಾರೆ. .
ಪಕ್ಷ ಬಿಟ್ಟು ಹೋಗಲು ಏನಾದರೂ ಕಾರಣ ಬೇಕಲ್ವ? ಶೆಟ್ಟರ್ರವರ ನಡೆ ರಾಜಕೀಯ ಆತ್ಮಹತ್ಯೆ ಇದ್ದಂತಿದೆ. ಕಾಂಗ್ರೆಸ್ ಪ್ರಾಧಾನಿ ಮಾಡುತ್ತೇವೆ ಎಂದಿರಬಹುದು ಅದಕ್ಕೆ ಅಲ್ಲಿಗೆ ಹೋಗಿದ್ದಾರೆ. ಉನ್ನತ ಸ್ಥಾನ ನೀಡಿದರು ಕಾಂಗ್ರೆಸ್ ಗೆ ಹೋಗಿದ್ದಾರೆ. ಸವದಿ ಮತ್ತು ಶೆಟ್ಟರ್ ನಿರ್ಧಾರ ಖಂಡನೀಯ ಎಂದ್ರು
ಬಸ್ ಸ್ಟ್ಯಾಂಡಿನಲ್ಲಿ ಟಿಕೆಟ್ ಮಾರುವಂತೆ ಕಾಂಗ್ರೆಸ್ ಟಿಕೆಟ್ ನೀಡುತ್ತಿದೆ ಎಂದು ಬಿ.ಸಿ.ಪಾಟೀಲ್ ಲೇವಡಿ ಮಾಡಿದ್ದಾರೆ. ಯಾವಾಗಲೂ ಬುಲೆಟ್ ಬಿಟ್ಟು ಬುಲ್ಡೋಜರ್ ಹತ್ತಬೇಕು. ಆದ್ರೆ ಶೆಟ್ಟರ್ ಬುಲೆಟ್ ಗಾಡಿ ಬಿಟ್ಟು ಸ್ಪ್ಲೆಂಡರ್ ಬೈಡ್ ಹತ್ತಿದ ರೀತಿಯಾಗಿದೆ ಎಂದು ವ್ಯಂಗ್ಯವಾಡಿದ್ರು
