ಬೆಂಗಳೂರು: ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿ ಬಿಜೆಪಿ ಮೂರನೇ ಪಟ್ಟಿಯನ್ನು ಸೋಮವಾರ ಸಂಜೆ ಬಿಡುಗಡೆ ಮಾಡಿದೆ. ಹತ್ತು ಮಂದಿಗೆ ಮೂರನೇ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.

ನಾಗಠಾಣಾ ಕ್ಷೇತ್ರದಿಂದ ಸಂಜೀವ್ ಐಹೊಳೆ, ಸೇಡಂನಿಂದ ರಾಜ್‌ಕುಮಾರ್ ಪಾಟೀಲ್, ಕೊಪ್ಪಳದಿಂದ ಮಂಜುಳಾ ಅಮರೇಶ್, ರೋಣದಿಂದ ಮಹೇಶ್ ಟೆಂಗಿನಕಾಯಿ, ಹಗರಿಬೊಮ್ಮನಹಳ್ಳಿಯಿಂದ ಬಿ.ರಾಮಣ್ಣ, ಹೆಬ್ಬಾಳದಿಂದ ಕಟ್ಟಾಜಗದೀಶ್, ಗೋವಿಂದರಾಜನಗರದಿಂದ ಉಮೇಶ್ ಶೆಟ್ಟಿ, ಮಹದೇವಪುರದಿಂದ ಮಂಜುಳಾ ಅರವಿಂದ ಲಿಂಬಾವಳಿ ಹಾಗೂ ಕೃಷ್ಣರಾಜ ಕ್ಷೇತ್ರದಿಂದ ಶ್ರೀವತ್ಸ ಅವರಿಗೆ ಟಿಕೆಟ್ ಘೋಷಿಸಲಾಗಿದೆ.