Monday, July 7, 2025
Homeಚುನಾವಣೆ 2023ಕಾಂಗ್ರೆಸ್‌ ಬಂದರೆ ಪ್ರಗತಿಗೆ ತೊಂದರೆ – ಬಿಜೆಪಿ ಟ್ವೀಟ್‌

ಕಾಂಗ್ರೆಸ್‌ ಬಂದರೆ ಪ್ರಗತಿಗೆ ತೊಂದರೆ – ಬಿಜೆಪಿ ಟ್ವೀಟ್‌

ಬೆಂಗಳೂರು: ಕಾಂಗ್ರೆಸ್‌ ಬಂದರೆ ಪ್ರಗತಿಗೆ ತೊಂದರೆ, ಅರಳಲಿದೆ ಕಮಲ ಗೆಲ್ಲಲಿದೆ ಕರ್ನಾಟಕ ಎಂದು ಬಿಜೆಪಿ ಟ್ವೀಟ್‌ ಮಾಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ವ್ಯಂಗ್ಯ ಚಿತ್ರದೊಂದಿಗೆ ಬಿಜೆಪಿ ಕರ್ನಾಟಕ ಅಧಿಕೃತ ಟ್ವೀಟ್‌ ಖಾತೆಯಿಂದ ಈ ಪೋಸ್ಟ್‌ ನ್ನು ಪ್ರಕಟಿಸಲಾಗಿದೆ.

ಕಾಂಗ್ರೆಸ್‌ ಆಡಳಿತದ ಸಮಯದಲ್ಲಿ ನಡೆದ ಶಿಕ್ಷಕರ ನೇಮಕಾತಿ ಹಗರಣ, ಐಎಂಎ ಹಗರಣ, ಹಾಸ್ಟೆಲ್‌ ಹಾಸಿಗೆ ದಿಂಬು ಹಗರಣ, ಕೃಷಿ ಭಾಗ್ಯ ಹಗರಣ, ಅರ್ಕಾವತಿ ಹಗರಣ ಮುಂತಾದವುಗಳನ್ನು ಉಲ್ಲೇಖಿಸಿರುವ ಬಿಜೆಪಿ, ಡಿಕೆಶಿ ಕುಣಿಯುತ್ತಿರುವ ಅನಿಮೇಷನ್‌ ವಿಡಿಯೋದಲ್ಲಿ ಇನ್ನೂ ಎಷ್ಟು ದಿನ ಇವರನ್ನು ಕುಣಿಯೋಕೆ ಬಿಡ್ತೀರಾ ಎಂದು ಪ್ರಶ್ನಿಸಿದೆ.

 

ಹೆಚ್ಚಿನ ಸುದ್ದಿ