ಲಡಾಖ್: 1999ರ ಕಾರ್ಗಿಲ್ ಯುದ್ಧ ಸಂದರ್ಭದ ಬಾಂಬ್ ಒಂದು 24 ವರ್ಷಗಳ ಬಳಿಕ ಸ್ಫೋಟಗೊಂಡಿದ್ದು, ಬಾಲಕ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಲಡಾಖ್ ನ ಕುರ್ಬತಾಂಗ್ ನಲ್ಲಿ ನಡೆದಿದೆ.
ಈ ಪ್ರದೇಶದವರೇ ಆದ ಅಲಿ ನಕಿ, ಮುಂತಝೀರ್ ಮೆಹದಿ ಮತ್ತು ಬಾಕಿರ್ ಎಂಬವರು ಆಟದ ಮೈದಾನಕ್ಕೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಇವರಲ್ಲಿ ಬಾಕಿರ್ ಬಾಂಬ್ ಮೇಲೆ ಎಡವಿ ಬಿದ್ದಿದ್ದು, ಬಾಂಬ್ ಸ್ಪೋಟಗೊಂಡಿದೆ. ಪರಿಣಾಮ ಬಾಕಿರ್ ಮೃತಪಟ್ಟಿದ್ದಾನೆ. ಇನ್ನಿಬ್ಬರು ಬಾಲಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಬಾಲಕನ ಕುಟುಂಬಕ್ಕೆ 4 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್ ಬಿ.ಡಿ ಮಿಶ್ರಾ ಹೇಳಿದ್ದಾರೆ.
