Monday, March 2, 2026
Homeಟಾಪ್ ನ್ಯೂಸ್BWSSB ಎಡವಟ್ಟು: ಗುಂಡಿಗೆ ಬಿದ್ದ ಬಾಲಕ ಸಾವು

BWSSB ಎಡವಟ್ಟು: ಗುಂಡಿಗೆ ಬಿದ್ದ ಬಾಲಕ ಸಾವು

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಕಾಮಗಾರಿ ಪೂರ್ಣ ಮಾಡದೆ, ತೆರೆದಿಟ್ಟು ಹೋಗಿರುವ ಗುಂಡಿಗೆ ಎರಡೂವರೆ ವರ್ಷದ ಬಾಲಕನೊಬ್ಬ ಬಿದ್ದು ಮೃತಪಟ್ಟಿದ್ದಾನೆ.

ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಗೊಲ್ಲರಹಟ್ಟಿ ಪೈಪ್‌ಲೈನ್‌ನಲ್ಲಿ ನಡೆದಿದೆ. ಎರಡೂವರೆ ವರ್ಷದ ಕಾರ್ತಿಕ್ ಮೃತ ಬಾಲಕ. ಕಾರ್ತಿಕ್ ಉತ್ತರ ಪ್ರದೇಶ ಮೂಲದ ಹನುಮಾನ್ ದಂಪತಿಯ ಪುತ್ರನಾಗಿದ್ದು, ಕೂಲಿ ಕೆಲಸಕ್ಕಾಗಿ ಕುಟುಂಬ ಸಹಿತ ಬೆಂಗಳೂರಿಗೆ ಬಂದಿದ್ದರು.

ಬಿಡಬ್ಲ್ಯುಎಸ್‌ಎಸ್‌ಬಿ ಕಾಮಗಾರಿಗಾಗಿ ಹೊಂಡ ತೆಗೆದಿದ್ದರು. ಕಾರ್ತಿಕ್ ಆಟವಾಡುತ್ತಾ ಅಚಾನಕ್ ಆಗಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ. ಈ ಕುರಿತು ಬಿಡಬ್ಲುಎಸ್‌ಎಸ್‌ಬಿ ಎಂಜಿನಿಯರ್ ಹಾಗೂ ಕಾಂಟ್ರ್ಯಾಕ್ಟರ್ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಹೆಚ್ಚಿನ ಸುದ್ದಿ