ಇಂದೋರ್ : 11 ವರ್ಷದ ಬಾಲಕನೊಬ್ಬನ ಬಟ್ಟೆ ಬಿಚ್ಚಿ, ಆತನಿಗೆ ಹಲ್ಲೆ ನಡೆಸಿ ಧಾರ್ಮಿಕ ಘೋಷಣೆಗಳನ್ನು ಕೂಗುವಂತೆ ಬಲವಂತಪಡಿಸಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ಪ್ರಕರಣದ ಆರೋಪಿಗಳೂ ಕೂಡ ಅಪ್ರಾಪ್ತರು ಎನ್ನಲಾಗಿದೆ.
ಸಂತ್ರಸ್ತ ಬಾಲಕನನ್ನು ಆರೋಪಿಗಳು ಆಟಿಕೆಯ ನೆಪದಲ್ಲಿ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ನಂತರ ಆತನ ಬಟ್ಟೆ ಬಿಚ್ಚಿ ಜೈ ಶ್ರೀ ರಾಮ್, ಹಿಂದುಸ್ತಾನ್ ಜಿಂದಾಬಾದ್ ಮತ್ತು ಪಾಕಿಸ್ತಾನ್ ಮುರ್ದಾಬಾದ್ ಘೋಷಣೆಗಳನ್ನು ಕೂಗಿಸಿದ್ದಾರೆ.
ನಂತರ ಬಾಲಕ ಮನೆಗೆ ಬಂದು ಕುಟುಂಬ ಸದಸ್ಯರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.ಇದಾದ ಬಳಿಕ ದೂರು ದಾಖಲಾಗಿದೆ.ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 323, 294 ಮತ್ತು 365 ಅನ್ವಯ ಪ್ರಕರಣ ದಾಖಲಿಸಲಾಗಿದೆ.
