Tuesday, October 7, 2025
Homeದೇಶಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್ ಪಡೆ: 3 ಪ್ಯಾಕೆಟ್ ಡ್ರಗ್ ವಶ

ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್ಎಫ್ ಪಡೆ: 3 ಪ್ಯಾಕೆಟ್ ಡ್ರಗ್ ವಶ

ಚಂಢೀಗಡ: ಪಂಜಾಬ್ ಅಮೃತಸರದಲ್ಲಿ ಪಾಕಿಸ್ತಾನದಿಂದ ಭಾರತದ ವಾಯುಪ್ರದೇಶದೊಳಗೆ ಬಂದಿದ್ದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ ಎಫ್) ಹೊಡೆದುರುಳಿಸಿದೆ.

ಅಮೃತಸರದಲ್ಲಿ ಜಿಲ್ಲೆಯ ಧನೋಯ್ ಕಲಾನ್ ಗ್ರಾಮದ ಬಳಿ ಶನಿವಾರ ರಾತ್ರಿ ಪಾಕಿಸ್ತಾನದ ಡ್ರೋನ್ ಹಾರಾಟ ನಡೆಸಿರುವುದು ಪತ್ತೆಯಾಗಿದೆ. ತಕ್ಷಣವೇ ಎಚ್ಚೆತ್ತ ಬಿಎಸ್ ಎಫ್ ಪಡೆ, ಡ್ರೋನ್ ಅನ್ನು ಹೊಡೆದುರುಳಿಸಿದೆ. ಡ್ರೋನ್ ಗೆ ಅಳವಡಿಸಿದ್ದ ಚೀಲ ಪರಿಶೀಲಿಸಲಾಗಿದೆ. ಅದರಲ್ಲಿ ೩ ಪ್ಯಾಕೆಟ್ ಪತ್ತೆಯಾಗಿದ್ದು, ಅದು ಮಾದಕವಸ್ತು ಎಂದು ಶಂಕಿಸಲಾಗಿದೆ. ಅವುಗಳು ೩ ಕೆಜಿ ತೂಕ ಉಳ್ಳದ್ದಾಗಿದೆ.

ಅಲ್ಲದೇ ದ್ದ ಉಂಗುರದಂತಹ ಕಬ್ಬಿಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಸುದ್ದಿ