Monday, March 2, 2026
Homeಚುನಾವಣೆ 2023ನಾಮಪತ್ರ ಸಲ್ಲಿಸಲು ಆನೆ ಮೇಲೆ ಬಂದ ಅಭ್ಯರ್ಥಿ!

ನಾಮಪತ್ರ ಸಲ್ಲಿಸಲು ಆನೆ ಮೇಲೆ ಬಂದ ಅಭ್ಯರ್ಥಿ!

ಆನೇಕಲ್: ರಾಜ್ಯದಲ್ಲಿ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇದೀಗ ಆನೇಕಲ್ ಕ್ಷೇತ್ರದ ಬಿಎಸ್​ಪಿ ಅಭ್ಯರ್ಥಿ ಡಾ.ವೈ.ಚಿನ್ನಪ್ಪ ಅವರು ವಿಭಿನ್ನವಾಗಿ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಬಹುತೇಕ ಅಭ್ಯರ್ಥಿಗಳು ತೆರೆದ ವಾಹನ, ನಡಿಗೆಯ ಮೂಲಕ ಬಂದು ನಾಮಪತ್ರ ಸಲ್ಲಿಸುತ್ತಿದ್ದರೆ, ಡಾ.ವೈ.ಚಿನ್ನಪ್ಪ ಕೃತಕ ಆನೆ ಮೇಲೆ ಕುಳಿತು ಬಂದು ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದಾರೆ. ಕೃತಕ ಆನೆ ಸವಾರಿ ಸಾರ್ವಜನಿಕರಲ್ಲಿ ಕುತೂಹಲ ಉಂಟು ಮಾಡಿತ್ತು. ಆನೇಕಲ್ ಹೊಸ ಮಾಧ್ಯಮಿಕ ಶಾಲಾ ಆವರಣದಿಂದ ಪ್ರಮುಖ ಬೀದಿಗಳಲ್ಲಿ ಮಹಿಳಾ ಕೋಲಾಟ, ಗಾರುಡಿ ಬೊಂಬೆ ಹಾಗು ಬಿಎಸ್ಪಿ ಕಾರ್ಯಕರ್ತರೊಂದಿಗೆ ಆಗಮಿಸಿದ ಅವರು ನಾಮಪತ್ರ ಸಲ್ಲಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಲವು ವರ್ಷಗಳಿಂದ ಅಧಿಕಾರ ನಡೆಸಿರುವ ಬಿಜೆಪಿ ಆಗಲೀ ಕಾಂಗ್ರೆಸ್​ ಆಗಲೀ ಈ ಭಾಗಕ್ಕೆ ಯಾವುದೇ ಅಭಿವೃದ್ದಿ ಕೆಲಸ ಮಾಡಿಲ್ಲ. ಈ ಬಾರಿ ಬಹುಜನ ಸಮಾಜ ಪಕ್ಷಕ್ಕೆ ಮತ ನೀಡಿ, ನನ್ನನ್ನು ಗೆಲ್ಲಿಸಿಕೊಡಿ. ನಾನು ಗೆದ್ದರೆ ಶಿಕ್ಷಣ, ಆರೋಗ್ಯ ಮೂಲಭೂತ ಸೌಲಭ್ಯ ಒದಗಿಸುತ್ತೇನೆ” ಎಂದು ಭರವಸೆ ನೀಡಿದರು. ಡಾ.ವೈ.ಚಿನ್ನಪ್ಪ 2 ಕೋಟಿಗೂ ಅಧಿಕ ಚರಾಸ್ತಿ ಮತ್ತು ಸ್ಥಿರಾಸ್ತಿ ಘೋಷಿಸಿದ್ದಾರೆ.

ಹೆಚ್ಚಿನ ಸುದ್ದಿ