Monday, March 2, 2026
Homeಚುನಾವಣೆ 2023ಯಾರೇ ಪಕ್ಷ ತೊರೆದರೂ ಬಿಜೆಪಿ ಅಧಿಕಾರಕ್ಕೇರೋದು ನಿಶ್ಚಿತ : ಬಿಎಸ್ ವೈ

ಯಾರೇ ಪಕ್ಷ ತೊರೆದರೂ ಬಿಜೆಪಿ ಅಧಿಕಾರಕ್ಕೇರೋದು ನಿಶ್ಚಿತ : ಬಿಎಸ್ ವೈ

ಯಾರು ಪಕ್ಷ ಬಿಡಲಿ ಹೋಗಲಿ ನಾವಂತೂ ಸರ್ಕಾರ ರಚನೆ ಮಾಡೋದು ನಿಶ್ಚಿತ, ಧೃತಿಗೆಡುವ ಪ್ರಶ್ನೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡ್ಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾದ್ಯಮದವರೊಂದಿಗೆ ಮಾತನಾಡಿದ ಅವರು ಜಗದೀಶ್ ಶೆಟ್ಟರ್ ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿರುವ ವಿಚಾರದ ಕುರಿತು ಮಾತನಾಡಿದ ಬಿಎಸ್ ವೈ, ಅಸಮಾಧಾನಗೊಂಡು ಪಕ್ಷವನ್ನು ಯಾರೇ ತೊರೆದರೂ ಜನಬೆಂಬಲ ಇದೆ. ಹೀಗಾಗಿ ರಾಜ್ಯದಲ್ಲಿ ಮತ್ತೊಮ್ಮೆ‌ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದರು.

ನಾಳೆ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಹುಬ್ಬಳ್ಳಿಗೆ ಬರುತ್ತಾರೆ. ಹೀಗಾಗಿ ನಾಳೆ ನಾಡಿದ್ದಿನಿಂದ ನಮ್ಮ ಪ್ರವಾಸವೂ ಆರಂಭವಾಗುತ್ತದೆ. ರಾಜ್ಯದಲ್ಲಿ ರಾಷ್ಟ್ರೀಯ ನಾಯಕರು ಓಡಾಡಿದ ಮೇಲೆ ವಾತಾವರಣ ನೂರಕ್ಕೆ ನೂರು ನಮ್ಮ ಪರವಾಗುತ್ತದೆ. ಬಳಿಕ ಎರಡು ಮೂರು ದಿನ ಬಿಟ್ಟು ಹುಬ್ಬಳ್ಳಿಗೆ ಹೋಗುತ್ತೇನೆ ಎಂದರು.

ಹೆಚ್ಚಿನ ಸುದ್ದಿ