Wednesday, March 4, 2026
Homeಟಾಪ್ ನ್ಯೂಸ್ಕನ್ನಡಿಗರಿಗೆ ಸಿಹಿಸುದ್ದಿ: ಇನ್ನು ಕನ್ನಡದಲ್ಲೇ ಬರೆಯಿರಿ ಸಿಎಪಿಎಫ್ ಪರೀಕ್ಷೆ

ಕನ್ನಡಿಗರಿಗೆ ಸಿಹಿಸುದ್ದಿ: ಇನ್ನು ಕನ್ನಡದಲ್ಲೇ ಬರೆಯಿರಿ ಸಿಎಪಿಎಫ್ ಪರೀಕ್ಷೆ

ನವದೆಹಲಿ: ಇನ್ನು ಮುಂದೆ ಕರ್ನಾಟಕದ ಕೇಂದ್ರ ಸಶಸ್ತ್ರ ಪೊಲೀಸ್‌ ಪಡೆ ಅಂದರೆ ಸಿಎಪಿಎಫ್ ಅಭ್ಯರ್ಥಿಗಳು ಕನ್ನಡದಲ್ಲಿ ಪರೀಕ್ಷೆ ಬರೆಯಬಹುದಾಗಿದೆ.

ನೇಮಕಾತಿ ಪರೀಕ್ಷೆಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅವಕಾಶ ನೀಡಬೇಕು ಎನ್ನುವ ಆಗ್ರಹಗಳ ನಡುವೆ ಕೇಂದ್ರ ಗೃಹ ಸಚಿವಾಲಯವು ಕಾನ್‌ಸ್ಟೆಬಲ್ ಸಿಎಪಿಎಫ್‌ ಪರೀಕ್ಷೆಯನ್ನು ಹಿಂದಿ, ಇಂಗ್ಲೀಷ್‌ ಹಾಗೂ ಕನ್ನಡ ಸೇರಿ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ನಿರ್ಧರಿಸಿದೆ.

ಪರಿಣಾಮ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಿಗೆ ಸೇರಬಯಸುವವರು ನೇಮಕಾತಿ ಪರೀಕ್ಷೆಯನ್ನು ಕನ್ನಡ ಸೇರಿ ಆಯಾ ಆಯಾ ರಾಜ್ಯಗಳ ಭಾಷೆಗಳಲ್ಲಿ ಬರೆಯಬಹುದಾಗಿದೆ.

ಸಿಎಪಿಎಫ್‌ನಲ್ಲಿ ಸ್ಥಳೀಯ ಯುವ ಜನತೆ ಸೇರುವಂತೆ ಪ್ರೋತ್ಸಾಹಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹಸಚಿವಾಲಯ ತಿಳಿಸಿದೆ.

ಈ ಕ್ರಮದ ನಂತರ ಸಿಎಪಿಎಫ್‌ ಪರೀಕ್ಷೆಯನ್ನು ಇಂಗ್ಲಿಷ್‌, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತ್‌, ಮರಾಠಿ, ಮಲಯಾಳಂ, ಕನ್ನಡ, ತಮಿಳು, ತೆಲುಗು, ಒಡಿಯಾ, ಉರ್ದು, ಪಂಜಾಬಿ, ಮಣಿಪುರಿ ಮತ್ತು ಕೊಂಕಣಿ ಭಾಷೆಗಳಲ್ಲಿ ಬರೆಯಬಹುದಾಗಿದೆ.

ಹೆಚ್ಚಿನ ಸುದ್ದಿ