Monday, October 13, 2025
Homeಟಾಪ್ ನ್ಯೂಸ್3 ವರ್ಷದ ಬಾಲಕಿಯ ಅತ್ಯಾಚಾರಗೈದ 1ನೆ ತರಗತಿ ವಿದ್ಯಾರ್ಥಿಯ ಬಂಧನ

3 ವರ್ಷದ ಬಾಲಕಿಯ ಅತ್ಯಾಚಾರಗೈದ 1ನೆ ತರಗತಿ ವಿದ್ಯಾರ್ಥಿಯ ಬಂಧನ

ಮುಝಫ್ಫರ್ ನಗರ: 10 ವರ್ಷದ ಬಾಲಕನೊಬ್ಬ 3 ವರ್ಷದ ಬಾಲಕಿಯ ಅತ್ಯಾಚಾರಗೈದ ಘಟನೆ ಉತ್ತರ ಪ್ರದೇಶದ ಮುಝಫ್ಫರ್ ನಗರದಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿ ಬಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ.

ಬಾಲಕಿಯನ್ನು ಶಾಲೆಯ ಮೇಲ್ಛಾವಣಿಗೆ ಕರೆದೊಯ್ದು ಬಾಲಕ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ಕುಟುಂಬಸ್ಥರು ನೀಡಿದ ದೂರನ್ನು ಆಧರಿಸಿ ಪ್ರಕರಣ ದಾಖಲಾಗಿದೆ.

ಆಘಾತಕಾರಿ ವಿಷಯವೆಂದರೆ ದೇಶದಲ್ಲಿ ಇಂತಹ ಭಯಾನಕ ಘಟನೆ ನಡೆಯುತ್ತಿರುವುದೇನೂ ಮೊದಲಲ್ಲ. ಕಳೆದ ವರ್ಷ ಮಧ್ಯಪ್ರದೇಶದ ಇಂದೋರ್‌ನಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿದ್ದು, ಅಲ್ಲಿ 12 ವರ್ಷದ ಹುಡುಗ 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ.

ಹೆಚ್ಚಿನ ಸುದ್ದಿ