Thursday, October 9, 2025
Homeಚುನಾವಣೆ 2023ಶೆಟ್ಟರ್ ರಾಜಿನಾಮೆ ಬಿಜೆಪಿಗೆ ಕಸಿವಿಸಿ : ಸಿಎಂ ಬೊಮ್ಮಾಯಿ

ಶೆಟ್ಟರ್ ರಾಜಿನಾಮೆ ಬಿಜೆಪಿಗೆ ಕಸಿವಿಸಿ : ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಜಗದೀಶ್ ಶೆಟ್ಟರ್ ಏಕಾಏಕಿ ರಾಜೀನಾಮೆ ನಿರ್ಧಾರ ಕೈಗೊಂಡಿರುವುದು ನೋವು ಕಸಿವಿಸಿ ತಂದಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಭಾನುವಾರ ಬೆಳಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು ಮೋದಿ ನೇತೃತ್ವದ ಆಡಳಿತದಲ್ಲಿ ರಾಜಕೀಯದಲ್ಲಿ ಅಮೂಲಾಗ್ರ ಬದಲಾವಣೆ ತರಲಾಗುತ್ತಿದೆ ಎಂದು ಹೈಕಮ್ಯಾಂಡ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮುಖ್ಯಮಂತ್ರಿಯಾಗಿದ್ದಾಗಲೇ ರಾಜೀನಾಮೆ ನೀಡಿದ ಯಡಿಯೂರಪ್ಪ ನಮಗೆ ಆದರ್ಶ ನಾಯಕರು ಎನ್ನುವ ಮೂಲಕ ಜಗದೀಶ್ ಶೆಟ್ಟರ್ ಅವರ ನಿರ್ಧಾರಕ್ಕೆ ಪರೋಕ್ಷವಾಗಿ ಅಸಮಾಧಾನ ಸೂಚಿಸಿರುವ ಸಿಎಂ ಬೊಮ್ಮಾಯಿ, ಈಶ್ವರಪ್ಪರ ರಾಜಕೀಯ ನಿವೃತ್ತಿಯನ್ನೂ ಸಹ ಉಲ್ಲೇಖಿಸಿದ್ರು

ಎರಡನೇ ಪೀಳಿಗೆಯ ರಾಜಕಾರಣವನ್ನು ಬೆಂಬಲಿಸುವುದೇ ಶೆಟ್ಟರ್‌ಗೆ ಟಿಕೆಟ್ ನೀಡದಿರುವುದಕ್ಕೆ ಕಾರಣ ಎಂದ ಸಿಎಂ ಬೊಮ್ಮಾಯಿ, ಹೊಸಬರು, ಯುವಕರು ಬೆಳೆಯಬೇಕಿದೆ. ನಿರಾಣಿ, ಸೋಮಣ್ಣನವರಂಥ ಪ್ರಬಲ ರಾಜಕಾರಣಿಗಳು ಇಂದು ಮುಂಚೂಣಿಗೆ ಬರುತ್ತಿದ್ದಾರೆಂದು ರಾಜಕೀಯ ಪರ್ವ ಬದಲಾಗುತ್ತಿರುವುದರ ಸೂಚನೆ ನೀಡಿದ್ದಾರೆ.
ಜಗದೀಶ್ ಶೆಟ್ಟರ್ ಅವರಿಗೆ ಇದಕ್ಕಿಂತ ದೊಡ್ಡ ಹುದ್ದೆ ನೀಡುವುದಾಗಿ ಹೇಳಿದರೂ ಅವರು ಒಪ್ಪುತ್ತಿಲ್ಲ. ನಡ್ಡಾ, ಅಮಿತ್ ಶಾ ಅವರೂ ಸಹ ಶೆಟ್ಟರ್ ಅವರೊಡನೆ ಮಾತನಾಡಿದ್ದಾರೆಂದು ಸಿಎಂ ಮಾಹಿತಿ ನೀಡಿದರು.

ಪಕ್ಷಕ್ಕೆ ಆಗುವ ಧಕ್ಕೆ ತಪ್ಪಿಸುವ ಪ್ರಯತ್ನದಲ್ಲಿರುವ ಬೊಮ್ಮಾಯಿ, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಅಭಿವೃಧ್ದಿ ಹಾಗೂ ಲಿಂಗಾಯಿತ ಸಮುದಾಯಕ್ಕೆ ಅತಿಹೆಚ್ಚು ಟಿಕೆಟ್ ನೀಡಿರುವುದು ಬಿಜೆಪಿ ಪಕ್ಷ ಎಂದು ಡ್ಯಾಮೇಜ್ ಕಂಟ್ರೋಲ್‌ ಮಾಡುವ ಕೆಲಸ ಮಾಡಿದ್ರು

ಹೆಚ್ಚಿನ ಸುದ್ದಿ