Monday, March 2, 2026
Homeಚುನಾವಣೆ 2023ಚುನಾವಣೆ ಬಳಿಕ ಶೆಟ್ಟರ್ ಅವರನ್ನು ಕಾಂಗ್ರೆಸ್ ಹೊರಹಾಕಲಿದೆ - ಸಿಎಂ

ಚುನಾವಣೆ ಬಳಿಕ ಶೆಟ್ಟರ್ ಅವರನ್ನು ಕಾಂಗ್ರೆಸ್ ಹೊರಹಾಕಲಿದೆ – ಸಿಎಂ

ಬೆಂಗಳೂರು: ಕಾಂಗ್ರೆಸ್ ಜಗದೀಶ್ ಶೆಟ್ಟರ್ ಅವರನ್ನು ಚುನಾವಣೆಯವರೆಗೂ ಬಳಸಿಕೊಂಡು ಬಳಿಕ ಹೊರಹಾಕಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ವೀರೇಂದ್ರ ಪಾಟೀಲ್, ಬಂಗಾರಪ್ಪ, ದೇವರಾಜ ಅರಸು ಅಂಥವರನ್ನು ಹೊರಹಾಕಿದ ಪಕ್ಷಕ್ಕೆ ಜಗದೀಶ್ ಶೆಟ್ಟರ್ ಕಾಲಿಟ್ಟಿದ್ದಾರೆ. ಅವರಿನ್ನು ಹಿಂದಿರುಗಿ ಬರುವ ನಿರೀಕ್ಷೆಯೂ ಇಲ್ಲ ಎಂದರು.
ಯಾರಾದರೂ ಪಕ್ಷ ಬಿಟ್ಟು ಹೋದಾಗ ಸರಿಯಾದ ಕಾರಣ ನೀಡಬೇಕು. ಕಳೆದ ೨೫ ವರ್ಷದಲ್ಲಿ ಬಿಜೆಪಿ ಶೆಟ್ಟರ್ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಅವರನ್ನು ಕಡೆಗಣಿಸಿರುವ ಪ್ರಶ್ನೆಯೇ ಇಲ್ಲ. ಹೊರಹೋಗುವುದಕ್ಕೆ ಅವರಿಗೊಂದು ನೆಪ ಬೇಕಿತ್ತು ಅಷ್ಟೇ ಎಂದು ಟೀಕಿಸಿದ ಸಿಎಂ ಬೊಮ್ಮಾಯಿ, ಎಲ್ಲಿಯವರೆಗೂ ಬಿಎಸ್‌ವೈ ನಮ್ಮೊಡನೆ ಇರುತ್ತಾರೆಯೋ ಅಲ್ಲಿಯವರೆಗೂ ಮತಬ್ಯಾಂಕ್ ನಮ್ಮನ್ನು ಬಿಟ್ಟುಹೋಗುವುದಿಲ್ಲ ಎಂದರು.

ಹೆಚ್ಚಿನ ಸುದ್ದಿ