ಬೆಂಗಳೂರು: ಮಂಗಳವಾರ ಸಂಜೆ ಕಾಂಗ್ರೆಸ್ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆಯಾಗಿದ್ದು, ಏಳು ಮಂದಿಗೆ ಇದರಲ್ಲಿ ಸ್ಥಾನ ನೀಡಲಾಗಿದೆ. ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿಯಿಂದ ಪಕ್ಷಾಂತರಗೊಂಡಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ್ದಾರೆ.
ಮಿಕ್ಕಂತೆ ಲಿಂಗಸುಗೂರು (ಎಸ್‌ಸಿ) ಕ್ಷೇತ್ರಕ್ಕೆ ದುರ್ಗಪ್ಪ.ಎಸ್. ಹೂಲಗೇರಿ, ಹುಬ್ಬಳ್ಳಿ-ಧಾರವಾಡ ಪಶ್ಚಿಮಕ್ಕೆ ದೀಪಕ್ ಚಿಂಚೋರ್, ಶಿಗ್ಗಾವಿಗೆ ಮೊಹಮ್ಮದ್ ಯೂಸುಫ್ ಸವಣೂರ್, ಹರಿಹರಕ್ಕೆ ನಂದಗಾವಿ ಶ್ರೀನಿವಾಸ್, ಚಿಕ್ಕಮಗಳೂರು ಕ್ಷೇತ್ರಕ್ಕೆ ಎಚ್.ಡಿ.ತಮ್ಮಯ್ಯ ಹಾಗೂ ಶ್ರವಣಬೆಳಗೊಳದಿಂದ ಎಂ.ಎ.ಗೋಪಾಲಸ್ವಾಮಿಗೆ ಟಿಕಟ್ ನೀಡಲಾಗಿದೆ.