Monday, March 2, 2026
Homeಚುನಾವಣೆ 2023ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರಿಂದ ನಾಮಪತ್ರ ಸಲ್ಲಿಕೆ

ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡರಿಂದ ನಾಮಪತ್ರ ಸಲ್ಲಿಕೆ

ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಘಟಾನುಘಟಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ‌ ಪ್ರಾರಂಭಿಸಿದ್ದಾರೆ. ಇಂದು ಬೆಂಗಳೂರಿನ ಗಾಂಧಿನಗರ ಕಾಂಗ್ರೆಸ್ ‌ಅಭ್ಯರ್ಥಿಯಾಗಿ ದಿನೇಶ್ ಗುಂಡೂರಾವ್ ನಾಮಪತ್ರ ಸಲ್ಲಿಸಿದರು.


ಸಾವಿರಾರು ಕಾರ್ಯಕರ್ತರ‌ ಜೊತೆ ಬಂದು ಗಾಂಧಿನಗರ ಚುನಾವಣಾ ಅಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ಸತತ ಐದು ಬಾರಿ ಗೆದ್ದು ಆರನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದೇನೆ. ಗಾಂಧಿನಗರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಎಲ್ಲ ಜನಾಂಗದ ಜನರು ಇಲ್ಲಿ ವಾಸ ಮಾಡ್ತಾರೆ. ಯಾವುದೇ ಗಲಭೆಯಿಲ್ಲದೆ ನೆಮ್ಮದಿ ಬದಕು ಕಟ್ಟಿಕೊಂಡಿದ್ದಾರೆ. ಐದು ಬಾರಿ ಗೆಲ್ಲುವುದಕ್ಕೆ ಅಭಿವೃದ್ಧಿಯೇ ಶ್ರೀರಕ್ಷೆ. ಈ ಬಾರಿ ಕೂಡ ಕ್ಷೇತ್ರದ ಜನರು ಆಯ್ಕೆ ಮಾಡ್ತಾರೆ ಎಂಬ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಇನ್ನೊಂದೆಡೆ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಕೂಡಾ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಎರಡನೇ ಬಾರಿ ಆಯ್ಕೆ ಬಯಸಿ ಕಣಕ್ಕಿಳಿದಿರುವ ರಿಜ್ವಾನ್ ಅರ್ಷದ್ ಶಿವಾಜಿನಗರ ವಿಧಾನಸಭೆ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.


ಬಾಲ್ಕಿ ಕ್ಷೇತ್ರದ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಈಶ್ವರ ಖಂಡ್ರೆ ಅವರೂ ನಾಮಪತ್ರ ಸಲ್ಲಿಸಲಿದ್ದಾರೆ. ಬೃಹತ್ ಬೆಂಬಲಿಗರರು ಹಾಗೂ ಭಾಲ್ಕಿ ತಾಲೂಕಿನ ಜನರ ಅಭಿಮಾನದ ಪ್ರೀತಿಯ ಆಶೀರ್ವಾದದೊಂದಿಗೆ ಮೆರವಣಿಗೆ ಮೂಲಕ ತಹಸಿಲ್ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಚಿತ್ತಾಪುರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಯಾಂಕ್‌ ಖರ್ಗೆ ನಾಂಪತ್ರ ಸಲ್ಲಿಸಿದ್ರು

ಹೆಚ್ಚಿನ ಸುದ್ದಿ