Monday, March 2, 2026
Homeಚುನಾವಣೆ 2023ಕಾಂಗ್ರೆಸ್‌ ಮಾಜಿ ಶಾಸಕ ಅನಿಲ್‌ ಲಾಡ್‌ಗೆ ಜೆಡಿಎಸ್‌ ಬಿಫಾರಂ

ಕಾಂಗ್ರೆಸ್‌ ಮಾಜಿ ಶಾಸಕ ಅನಿಲ್‌ ಲಾಡ್‌ಗೆ ಜೆಡಿಎಸ್‌ ಬಿಫಾರಂ

ಬಳ್ಳಾರಿ: ಕಾಂಗ್ರೆಸ್’ನಲ್ಲಿ ಬಂಡಾಯದ ಬಾವುಟ ಹಾರಿಸಿದ್ದ  ಮಾಜಿ ಶಾಸಕ ಅನಿಲ್‌ ಲಾಡ್‌, ರಾತ್ರೋರಾತ್ರಿ ಜೆಡಿಎಸ್‌ ಸೇರಿಕೊಂಡಿದ್ದು, ಪಕ್ಷದಿಂದ ಬಿಫಾರಂ ಅನ್ನೂ ದಕ್ಕಿಸಿಕೊಂಡಿದ್ದಾರೆ.

ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಅನಿಲ್ ಲಾಡ್ ಅವರು, ಮಂಗಳವಾರ ತಡರಾತ್ರಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು,  ಮುಂಜಾನೆ ಹೆಚ್.‌ ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಬಳ್ಳಾರಿ ಕ್ಷೇತ್ರದಿಂದಲೇ ಸ್ಪರ್ಧಿಸಲು ಬಿ ಫಾರ್ಮ್‌ ಪಡೆದುಕೊಂಡಿದ್ದಾರೆ.

ಈ ಹಿಂದೆ ಬಳ್ಳಾರಿ ಕ್ಷೇತ್ರಕ್ಕೆ ಜೆಡಿಎಸ್‌  ಭಕಾಶ್‌ ಮುನ್ನ ಎಂಬುವವರಿಗೆ ಟಿಕೆಟ್‌ ನೀಡಿತ್ತು. ಇದೀಗ ಅಭ್ಯರ್ಥಿಯನ್ನು ಬದಲಾಯಿಸಿ ಬಳ್ಳಾರಿ ಕ್ಷೇತ್ರಕ್ಕೆ ಅನಿಲ್‌ ಲಾಡ್‌ ರಿಗೆ ಟಕೆಟ್‌ ನೀಡಿದೆ.

 

 

 

 

ಹೆಚ್ಚಿನ ಸುದ್ದಿ