Monday, March 2, 2026
Homeಟಾಪ್ ನ್ಯೂಸ್ಕಳ್ರನ್ನು ಕಳ್ರು ಅನ್ನೋದು ತಪ್ಪಾ? ಸಿದ್ದು ಪ್ರಶ್ನೆ

ಕಳ್ರನ್ನು ಕಳ್ರು ಅನ್ನೋದು ತಪ್ಪಾ? ಸಿದ್ದು ಪ್ರಶ್ನೆ

ರಾಹುಲ್‌ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದನ್ನು ಖಂಡಿಸಿ ಕಾಂಗ್ರೆಸ್‌ ದೇಶಾದ್ಯಂತ ಸತ್ಯಾಗ್ರಹ ನಡೆಸುತ್ತಿದ್ದು, ಎಲ್ಲಾ ರಾಜ್ಯಗಳ ಜಿಲ್ಲಾ ಕೇಂದ್ರದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗಳ ಬಳಿ ಪ್ರತಭಟನೆಗಳನ್ನು ನಡೆಸುತ್ತಿದೆ.

ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲೂ ಕಾಂಗ್ರೆಸ್‌ ಪ್ರತಿಭಟನೆ ನಡೆಸುತ್ತಿದ್ದು, ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಫ್ರೀಡಂ ಪಾರ್ಕಿಗೆ ಜಮಾಯಿಸಿದ್ದಾರೆ.

ಕಳ್ಳ ರನ್ನು ಕಳ್ಳ ಅಂತ ರಾಹುಲ್ ಗಾಂಧಿ ಕರೆದಿದ್ದಾರೆ. ಅದು ಬಿಟ್ಟು ಬೇರೆನು ಹೇಳಿಲ್ಲ. ಭಾರತ್ ಜೋಡೋ ಯಶಸ್ಸು ಅಮೀತ್ ಶಾ, ಮೋದಿ, ನಡ್ಡಾಗೆ ತೆಡೆದುಕೊಳ್ಳಲು ಆಗ್ತಿಲ್ಲ. ಪ್ರಜಾಪ್ರಭುತ್ವದಲ್ಲಿ‌ ವಾಕ್ ಸ್ವತಂತ್ರ ಇದೆ. ಲೋಕಸಭೆಯಲ್ಲಿ ರಾಹುಲ್ ಗೆ ಮಾತನಾಡಲು ಅವಕಾಶ ನೀಡಲಿಲ್ಲ. ನೇರವಾಗಿ ರಾಹುಲ್ ಸದಸ್ಯತ್ವ ರದ್ದು ಮಾಡಿದ್ದಾರೆ. ಇದಕ್ಕಿಂತ ಕೆಟ್ಟ ರಾಜಕೀಯ ಮತ್ತೊಂದಿಲ್ಲ ಎಂದು ಬಿಕೆ ಹರಿಪ್ರಸಾದ್‌ ಆಕ್ರೋಶ ಹೊರಹಾಕಿದ್ದಾರೆ.

ಇದ್ದು ಹಿಟ್ಲರ್ ನ ಜರ್ಮನಿಯ ದೇಶ ಅಲ್ಲ.ಮುಸಲೋನಿಯ ಇಟಲಿ ದೇಶ ಅಲ್ಲ. ಭಾರತ.ಪ್ರಬಲವಾದ ವಿರೋಧ ಪಕ್ಷ  ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿ ಆಗುತ್ತೆ. ಬ್ಯಾಂಕ್ ಹಣ ಲೂಟಿ ಮಾಡಿ ಓಡಿಹೋಗಿದ್ದಾರೆ. ಅದರಲ್ಲಿ ಮೋದಿ ಹೆಸರಿನವರೆ ಜಾಸ್ತಿ ಇದ್ದಾರೆ. ಮೋದಿ ಹೆಸರಿನವರೆಲ್ಲ ಕಳ್ಳರು ಅಂತ ಕರೆದಿದ್ರು. ಬ್ಯಾಂಕ್ ಗೆ ಟೋಪಿ ಹಾಕಿ ಹೋಗಿದ್ದಾರೆ ಇಂತವರನ್ನು ಸಾಧು ಸಂತರು ಅಂತ ಕರೆಯಬೇಕಾ‌. ಕಳ್ಳರನ್ನು‌ ಕಳ್ಳ ಅಂತ ಕರೆಯಲು ಹಕ್ಕು ಇಲ್ಲವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯಿಂದ ರಾಹುಲ್ ಪಾಪ್ಯುಲರಾಟಿ ಹೆಚ್ಚಾಯಿತು. ಅದನ್ನು ತಡೆಯಲಾರದೆ ಸ್ಥಾನದಿಂದ ಅನರ್ಹ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಆರೋಪಿಸಿದ್ದಾರೆ.

ಹೆಚ್ಚಿನ ಸುದ್ದಿ