Monday, July 7, 2025
Homeಟಾಪ್ ನ್ಯೂಸ್ಲಂಚ ಪಡೆಯುತ್ತಿದ್ದ ಅಗ್ನಿಶಾಮಕ ಅಧಿಕಾರಿಗಳು ಲೋಕಾ ಬಲೆಗೆ

ಲಂಚ ಪಡೆಯುತ್ತಿದ್ದ ಅಗ್ನಿಶಾಮಕ ಅಧಿಕಾರಿಗಳು ಲೋಕಾ ಬಲೆಗೆ

ದಾವಣಗೆರೆ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಬಸವಪ್ರಭು ಶರ್ಮ ಹಾಗೂ ರಾಜೇಶ್ ಎಸ್.ಕೆ ಫೈರ್‌ಮ್ಯಾನ್‌, ಲೋಕಾಯುಕ್ತದ ಖೆಡ್ಡಾಗೆ ಬಿದ್ದಿದ್ದಾರೆ. ದಾವಣಗೆರೆಯ ತಮ್ಮ ಕಾರ್ಯಾಲಯದಲ್ಲಿ ಹರಿಹರ ನಗರ ವಾಸಿ ಡಿ.ಜಿ ರಘುನಾಥ್, ಛೇರ್‌ಮನ್ ಶ್ರೀದುರುಗೋಜಿ ಗೋಪಾಲ್‌ರಾವ್, ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ , ಹರಿಹರ ಇವರಿಗೆ ತಮ್ಮ ವಿಧ್ಯಾವಾಹಿನಿ ಶಾಲೆಗೆ ಅಗ್ನಿಶಾಮಕ ಎನ್ಓಸಿ ನೀಡಲು ಒಂದು ಡೆಲ್ ಕಂಪನಿಯ ಲ್ಯಾಪ್‌ಟಾಪ್ ಕೊಡುವಂತೆ ಲಂಚದ ಬೇಡಿಕೆ ಇಟ್ಟದ್ದರಂತೆ. ಈ ಕುರಿತು ಲೋಕಾಯುಕ್ತ ಠಾಣೆಯಲ್ಲಿ ಮೊ. ಸಂಖ್ಯೆ: 9/2023 ಕಲಂ 7 ( ಎ ) ಭ್ರಷ್ಟಚಾರ ತಡೆ ಕಾಯ್ದೆ 1988, ತಿದ್ದುಪಡಿ ಕಾಯ್ದೆ 2018 ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಈ ಬಗ್ಗೆ ದಾವಣಗೆರೆ ಲೊಕಾಯುಕ್ತ ಅಧಿಕಾರಿಗಳಿಗೆ ರಘುನಾಥ್ ದೂರು ನೀಡಿದ್ದರು. ರಘುನಾಥ್ ಸಹಾಯದಿಂದ ಲಂಚ ಕೊಡುವಾಗ ಲೊಕಾಯುಕ್ತ ಅಧಿಕಾರಿಗಳು ಟ್ರಾಪ್ ಮಾಡಿದ್ದಾರೆ. ಅಗ್ನಿಶಾಮಕ ದಳದ ಇಬ್ಬರು ಅಧಿಕಾರಿಗಳ ಮೇಲೆ ಲೊಕಾಯುಕ್ತ ಇಲಾಖೆಯಲ್ಲಿ ಪ್ರಕರಣ ದಾಖಲಿಸಲಾಗಿದೆ

ಹೆಚ್ಚಿನ ಸುದ್ದಿ