Saturday, June 27, 2026
Homeದೇಶತಿರುಪತಿ ದೇವಸ್ಥಾನದ ಟ್ರಸ್ಟ್ ಗೆ 1 ಕೋಟಿ ರೂ. ದೇಣಿಗೆ ನೀಡಿದ ಭಕ್ತ

ತಿರುಪತಿ ದೇವಸ್ಥಾನದ ಟ್ರಸ್ಟ್ ಗೆ 1 ಕೋಟಿ ರೂ. ದೇಣಿಗೆ ನೀಡಿದ ಭಕ್ತ

ಹೈದರಾಬಾದ್: ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಟ್ರಸ್ಟ್ ಗೆ ಹೈದರಾಬಾದ್ ನ ಭಕ್ತರೊಬ್ಬರು ಒಂದು ಕೋಟಿ ರೂಪಾಯಿ ದಾನ ನೀಡಿದ್ದಾರೆ.

ತಿರುಮಲ ದೇವಸ್ಥಾನದ ಟ್ರಸ್ಟ್ ಸದಸ್ಯರನ್ನು ಭೇಟಿಯಾದ ಎವಿಕೆ ಪ್ರಸಾದ್ ಎಂಬವರು ಡಿಮಾಂಡ್ ಡ್ರಾಫ್ಟ್ ರೂಪದಲ್ಲಿ ಒಂದು ಕೋಟಿ ರೂಪಾಯಿ ದಾನ ನೀಡಿದ್ದಾರೆ.

ಟ್ರಸ್ ಮೂಲಕ ನಡೆಯುವ ಚಟುವಟಿಕೆಗಳಿಗೆ ಈ ಹಣವನ್ನು ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುವ ತಿರುಪತಿ ತಿರುಮಲ ದೇವಸ್ಥಾನ ದೇಶದಲ್ಲಿ ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಒಂದು.

ಹೆಚ್ಚಿನ ಸುದ್ದಿ