ಚಿಕ್ಕಮಗಳೂರು: ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿ ಅಲ್ಲೂ ಟಿಕೆಟ್ ಕೈಪ್ಪಿದ ಮೇಲೆ ಮತ್ತ ಜೆಡಿಎಸ್ಗೆ ಮರಳಿರುವ ವೈಎಸ್ವಿ ದತ್ತಾ ವಿರುದ್ಧ ಕಡೂರು ಜೆಡಿಎಸ್ ಅಭ್ಯರ್ಥಿ ಸಿಟ್ಟಾಗಿದ್ದಾರೆ.
ಕಡೂರು ಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಪಡೆದು ಕೆಲಸ ಪ್ರಾರಂಭಿಸಿದ್ದ ಅಭ್ಯರ್ಥಿ ಧನಂಜಯ್ ಈಗ ದತ್ತಾ ಹಾಗೂ ಜೆಡಿಎಸ್ ವಿರುದ್ಧ ತಿರುಗಿಬಿದ್ದಿದ್ದಾರೆ. ನೂರಾರು ಕಾರ್ಯಕರ್ತರ ಬೆಂಬಲ ನನಗಿದೆ. ಕುಮಾರಸ್ವಾಮಿ ಸಮ್ಮುಖದಲ್ಲೇ ನಾನು ಪಕ್ಷ ಸೇರ್ಪಡೆಗೊಂಡು ಕಾರ್ಯಾರಂಭ ಮಾಡಿದ್ದೇನೆ.. ಅಂದು ಕುಮಾರಸ್ವಾಮಿಯವರೂ ಕೂಡಾ ಸ್ವರ್ತ ತಾವೇ ಧನಂಜಯ್ ಎಂದು ತಿಳಿದು ಮತ ಹಾಕಿ ಎಂದೆಲ್ಲಾ ಹೇಳಿ ಹೋಗಿದ್ರು..ಈಗ ದಿಢೀರ್ ಎಂದು ಟಿಕೆಟ್ ಹಿಂಪಡೆದ್ರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಟಿಕೆಟ್ ಪಡೆದು ಕಡೂರು ಕ್ಷೇತ್ರದಿಂದ ಸ್ಪರ್ಧಿಸುವ ವೈಎಸ್ವಿ ದತ್ತಾ ಕನಸು ಭಗ್ನವಾದ ಮೇಲೆ ಮತ್ತೆ ಜೆಡಿಎಸ್ ಕದ ತಟ್ಟಿದ್ದಾರೆ. ಕಡೂರಿನಲ್ಲಿ ದತ್ತಾರವರೇ ಅಭ್ಯರ್ಥಿ ಎಂದು ರೇವಣ್ಣ ಘೋಷಿಸಿದ್ದರಿಂದ ಈಗಾಗಲೇ ಸ್ಪರ್ಧೆಗಿಳಿಸಿದ್ದ ಧನಂಜಯ್ ಕಂಗಾಲಾಗಿದ್ದಾರೆ
