ಬೆಂಗಳೂರು: ಕನಕಪುರದಲ್ಲಿ ನಮ್ಮ ಅಭ್ಯರ್ಥಿ ಆರ್.ಅಶೋಕ್ ಕಣಕ್ಕಿಳಿದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ಗೆ ಭಯ ಶುರುವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಹೇಳಿದ್ರು
ಕನಕಪುರದಲ್ಲಿ ಆರ್.ಅಶೋಕ್ ಸ್ಪರ್ಧೆಯಿಂದ ಡಿ.ಕೆ ಶಿವಕುಮಾರ್ ಕಂಗೆಟ್ಟಿದ್ದಾರೆ. ಈಗಾಗಲೇ ಅಶೋಕ್ ಪದ್ಮನಾಭನಗರದಲ್ಲಿ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಶೀಘ್ರವೇ ಅಶೋಕ್ ಕನಕಪುರಕ್ಕೆ ಭೇಟಿ ನೀಡ್ತಾರೆ ಎಂದ್ರು
ಕನಕಪುರಲ್ಲಿ ಅಶೋಕ್ ಸ್ಪರ್ಧೆಗೆ ಶಿವಕುಮಾರ್ ಲೇವಡಿ ಮಾಡಿದ್ರು ಆದ್ರೆ ಈಗ ಅವರಿಗೆ ಚುನಾವಣೆಯ ಫಲಿತಾಂಶದ ಬಗ್ಗೆ ಭಯ ಕಾಡ್ತಿದೆ. ಅದು ಯಾವ ರೀತಿಯ ಭಯ ಅನ್ನೋದು ಚುನಾವಣೆಯಲ್ಲಿ ಗೊತ್ತಾಗುತ್ತೆ ನೋಡಿ ಎಂದ್ರು.