ಕನಕಪುರ: ಕನಕಪುರ ಬಂಡೆ ಎಂದೇ ಕರೆಸಿಕೊಳ್ಳುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕನಕಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕನಕಪುರದಲ್ಲಿ ಜಾತ್ರೆಯ ವಾತಾವರಣ ಏರ್ಪಟ್ಟಿದೆ.
ಬೈಕ್ ಏರಿದ ಡಿ.ಕೆ ಶಿವಕುಮಾರ್ ಕೆಂಕೇರಮ್ಮ ದೇವಾಲಕ್ಕೆ ತೆರಳಿ ದೇವಿಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ್ರು. ಅಪಾರ ಬೆಂಬಲಿಗರೊಂದಿಗೆ ಬೈಕ್ ರ್ಯಾಲಿ ಮೂಲಕ ನಾಮಪತ್ರ ಸಲ್ಲಿಸಲು ಹೊರಟ ಡಿಕೆಶಿ “ಕನಕಪುರದ ಜನ ನನ್ನನ್ನು ಸಾಕಿ ಬೆಳಸಿ ಇಲ್ಲಿವರೆಗೂ ತಂದಿದ್ದಾರೆ. ಆ ಎಲ್ಲಾ ಜನತೆಯ ಆಶೀರ್ವಾದ ಪಡೆಯೋದಕ್ಕೆ ಹೋಗುತ್ತಿದ್ದೇನೆ. ಅವರ ಆಶೀರ್ವಾದದಿಂದ ಇಲ್ಲಿಯವರೆಗೂ ಬೆಳೆದಿದ್ದೇನೆ” ಎಂದಿದ್ದಾರೆ.




ಕನಕಪುರದಲ್ಲಿ ಡಿಕೆ ಶಿವಕುಮಾರ್ ಮೆರವಣಿಗೆ ವೇಳೆ ಲಕ್ಷಂತರ ಜನ ಅಭಿಮಾನಿಗಳು ನೆರೆದಿದ್ರು. ಈ ವೇಳೆ ಮೂಸಂಬಿ ಹಾರ ಹಾಕಿ ಜನ ಡಿ.ಕೆ ಶೀವಕುಮಾರ್ ಪರ ಘೋಷಣೆ ಕೂಗಿದ್ರು.

ಡಿ.ಕೆ ಶಿವಕುಮಾರ್ ವಿರುದ್ಧ ಬಿಜೆಪಿಯಿಂದ ಆರ್ ಅಶೋಕ್ ಕಣಕ್ಕಿಳಿದಿದ್ದು, ಎರಡು ಪ್ರಬಲ ಒಕ್ಕಲಿಗ ನಾಯಕರ ಹಣಾಹಣಿ ಸಾಕಷ್ಟು ಕುತೂಹಲ ಮೂಡಿಸಿದೆ.