ರಾಮನಗರ : ರಾಜ್ಯದ ಪ್ರತಿಷ್ಠೆಯ ಕಣಗಳಲ್ಲಿ ಒಂದಾಗಿರುವ ಕನಕಪುರ ಕ್ಷೇತ್ರದಿಂದ ಡಿ.ಕೆ.ಸುರೇಶ್ ಕೊನೆಯ ಘಳಿಗೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲ ಅಭ್ಯರ್ಥಿ ಆರ್. ಅಶೋಕ್ ಅವರನ್ನು ಕಣಕ್ಕಿಳಿಸಿತ್ತು.
ಡಿ.ಕೆ.ಶಿವಕುಮಾರ್ ವಿರುದ್ಧ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣಗಳೇ ಈ ನಡೆಗೆ ಕಾರಣ ಎನ್ನಲಾಗಿದ್ದು, ಯಾವುದೇ ಸಮಯದಲ್ಲೂ ಡಿ.ಕೆ.ಶಿವಕುಮಾರ್ ಅವರ ನಾಮಪತ್ರ ರದ್ದಾಗಲಿರುವ ಸಂಭವನೀಯತೆಯೂ ಇದೆ. ಈ ಕಾರಣದಿಂದಾಗಿ ಮುನ್ನೆಚ್ಚರಿಕಾ ಕ್ರಮದಿಂದ ಡಿ.ಕೆ.ಸುರೇಶ್ ಕೂಡ ಕನಕಪುರ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ನಾಮಪತ್ರ ಸಲ್ಲಿಸಿದ್ದಾರೆನ್ನಲಾಗಿದೆ. ನಾಮಪತ್ರ ಒಂದು ವೇಳೆ ಸುಸೂತ್ರವಾಗಿ ಸ್ವೀಕರಿಸಲ್ಪಟ್ಟರೆ ಆಗ ಡಿ.ಕೆ.ಸುರೇಶ್ ತಮ್ಮ ಉಮೇದುವಾರಿಕೆ ಹಿಂಪಡೆಯಲಿದ್ದಾರೆನ್ನಲಾಗಿದೆ.