ಬೆಂಗಳೂರು: ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ನಾಮಿನೇಷನ್ ಸಲ್ಲಿಸಿದ್ದು, ತಮ್ಮಲ್ಲಿರುವ ಅಧಿಕೃತ ಆಸ್ತಿಗಳ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಅಭ್ಯರ್ಥಿಗಳ ಪೈಕಿ ಚಿಕ್ಕಪೇಟೆಯ ಬಿಜೆಪಿ ಅಭ್ಯರ್ಥಿ ಉದಯ್ ಗರುಡಾಚಾರ್ ಅತ್ಯಂತ ಸಿರಿವಂತರಾಗಿದ್ದಾರೆ.
ಉದಯ್ ಗರುಡಾಚಾರ್ ರ ಒಟ್ಟು ಆಸ್ತಿ ಮೌಲ್ಯ, ಬರೋಬ್ಬರಿ 200.44 ಕೋಟಿ ರೂ ಇದೆ. ಪತ್ನಿ ಮೇದಿನಿ ಉದಯ್ ರ ಒಟ್ಟು ಆಸ್ತಿ ಮೌಲ್ಯ 41.14 ಕೋಟಿ ರೂ ಆಗಿದೆ.
ಉದಯ್ ಗರುಡಾಚರ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿ ಪ್ರಕಾರ, ಅವರಲ್ಲಿ 123.19 ಕೋಟಿ ರೂ. ಮೌಲ್ಯದ ಚರಾಸ್ತಿಯಿದ್ದು, 77.25 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಒಟ್ಟು 47.63 ಕೋಟಿ ರೂ. ಸಾಲವನ್ನು ಉದಯ್ ಮಾಡಿದ್ದರೆ, ಪತ್ನಿ ಮೇದಿನಿ ಹೆಸರಿನಲ್ಲಿ 97.65 ಲಕ್ಷ ರೂ.ಗಳ ಸಾಲವಿದೆ.
ಉದಯ್ ಗರುಡಾಚಾರ್ ಬಳಿ 5.49 ಕೋಟಿ ಮೊತ್ತದ 22 ಕೆ.ಜಿ ಬಂಗಾರ ಇದೆ. ಇನ್ನು 37.93 ಲಕ್ಷ ಮೌಲ್ಯದ 50 ಕೆ.ಜಿ ಬೆಳ್ಳಿ ವಸ್ತುಗಳನ್ನು ಕೂಡಾ ಉದಯ್ ಹೊಂದಿದ್ದಾರೆ. ಅವರ ಪತ್ನಿ ಹೆಸರಲ್ಲಿ 3.2 ಕೋಟಿ ಮೊತ್ತದ 22 ಕೆಜಿ ಬಂಗಾರ ಇದೆ. ಬರೋಬ್ಬರಿ 144 ಕೆ.ಜಿ ಬೆಳ್ಳಿಯ ಒಡೆತನವನ್ನು ಉದಯ್ ಪತ್ನಿ ಹೊಂದಿದ್ದು, ಇದರ ಮೌಲ್ಯವೇ 1.44 ಕೋಟಿ ರೂ. ಇದೆ.
