ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭ ತನ್ನ ವಿರುದ್ಧ ಮಾತನಾಡದಂತೆ ನೀಲಿ ಚಿತ್ರತಾರೆ ಒಬ್ಬರಿಗೆ ಹಣ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ಯೂಯಾರ್ಕ್ ಕೋರ್ಟ್ ಗೆ ಶರಣಾಗಿದ್ದಾರೆ.
ಈ ಮೂಲಕ ಅಮೆರಿಕದ ಅಧ್ಯಕ್ಷರಲ್ಲಿ ಪ್ರಪ್ರಥಮ ಬಾರಿಗೆ ಕ್ರಿಮಿನಲ್ ಪ್ರಕರಣವನ್ನು ಎದುರಿಸುತ್ತಿರುವವರು ಎನ್ನುವಂತಹ ಕುಖ್ಯಾತಿಗೆ ಪಾತ್ರರಾಗಿದ್ದಾರೆ.
ಕೋರ್ಟ್ ಹೊರ ಭಾಗದಲ್ಲಿ ಟ್ರಂಪ್ ವಿರೋಧಿ ಮತ್ತು ಟ್ರಂಪ್ ಪರ ಗುಂಪುಗಳು ಜಾಥಾಗಳನ್ನು ನಡೆಸಿತು.
2016ರ ಚುನಾವಣೆಯ ವೇಳೆ ತನ್ನ ವಿರುದ್ಧ ಮಾತನಾಡದಂತೆ ನೀಲಿ ಚಿತ್ರದ ತಾರೆಗೆ ಹಣ ನೀಡಿದ ಪ್ರಕರಣದಲ್ಲಿ ಟ್ರಂಪ್ ಈ ವಿಚಾರಣೆಯನ್ನು ಎದುರಿಸುತ್ತಿದ್ದಾರೆ.