Tuesday, March 3, 2026
Homeದೇಶಎಕೆ 47 ಮ್ಯಾಗಝಿನ್, ಹಣ ಸಾಗಿಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಸೇನೆ

ಎಕೆ 47 ಮ್ಯಾಗಝಿನ್, ಹಣ ಸಾಗಿಸುತ್ತಿದ್ದ ಡ್ರೋನ್ ಹೊಡೆದುರುಳಿಸಿದ ಸೇನೆ

ನವದೆಹಲಿ: ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸುತ್ತಿದ್ದಂತಹ ಅನುಮಾನಾಸ್ಪದ‌ ಡ್ರೋನ್ ಒಂದನ್ನು ಭದ್ರತಾ ಪಡೆ‌ ಹೊಡೆದುರುಳಿಸಿರುವ ಘಟನೆ ಜಮ್ಮು-ಕಾಶ್ಮೀರದ‌ ರಾಜೌರಿಯಲ್ಲಿ ನಡೆದಿದೆ.

ಗಡಿ ರೇಖೆಯ ಸಮೀಪ ಡ್ರೋನ್ ಹಾರಾಡುತ್ತಿರುವುದು ಕಾಣಿಸಿದ್ದು ತಕ್ಷಣಕ್ಕೆ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಕಾರ್ಯಾಚರಣೆಗಳಾಗಿದ್ದಾರೆ ಮತ್ತು ಡ್ರೋನ್ ಅನ್ನು ಹೊಡೆದು ಉರುಳಿಸಿದ್ದಾರೆ.

ಎಕೆ 47 ರೈಫಲ್ ನ 5 ಮ್ಯಾಗಝಿನ್ ಗಳು, 131 ಗುಂಡುಗಳು, 2 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ದೇಶದ ಗಡಿರೇಖೆ‌ ಸಮೀಪ ಇಂತಹ ಡ್ರೋನ್ ಗಳು ಈ ಹಿಂದೆಯೂ ಕಾಣಿಸಿಕೊಂಡಿದ್ದು, ಸೇನೆ ಹೊಡೆದುರುಳಿಸಿದ ಘಟನೆ ಈ ಹಿಂದೆಯೂ ನಡೆದಿತ್ತು.

ಹೆಚ್ಚಿನ ಸುದ್ದಿ