Monday, July 7, 2025
Homeಜಿಲ್ಲಾ ಸುದ್ದಿಗಳುನೀವು ತಿನ್ನುವ ಆಹಾರದ ಬಗ್ಗೆ ಗಮನವಿದೆಯೇ?

ನೀವು ತಿನ್ನುವ ಆಹಾರದ ಬಗ್ಗೆ ಗಮನವಿದೆಯೇ?

ನೀವು ಎಷ್ಟು ಬೇಕಾದ್ರೂ ತಿನ್ನಿ. ಆದ್ರೆ ನೀವು ತಿಂದಿದ್ದನ್ನು ಅರಗಿಸಿಕೊಳ್ಳುತ್ತೀರಾ ಅನ್ನೋದರ ಬಗ್ಗೆ ಹೆಚ್ಚು ಗಮನ ಕೊಡಿ. ನೀವು ತಿನ್ನುವ ಆಹಾರ ನಿಮ್ಮ ಹೊಟ್ಟೆ ಸೇರೋದಷ್ಟೇ ಅಲ್ಲ. ನಂತರ ಅದು ಪಚನಗೊಂಡು ಕೆಲ ಆಹಾರ ಪದಾರ್ಥ ಕೊಬ್ಬಿನ ಅಂಶವಾಗಿ ಪರಿವರ್ತನೆಗೊಳ್ಳುತ್ತದೆ. ಹೀಗೆ ಪರಿವರ್ತನೆಗೊಂಡ ಕೊಬ್ಬು ಕರಗದೇ ಹೋದಾಗ ನಿಮಗೆ ಸ್ಥೂಲಕಾಯ ಬೊಜ್ಜು ಮತ್ತು ಅದಕ್ಕೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತೆ.

ಅದಕ್ಕಾಗಿಯೇ ನಿಮ್ಮ ಆಹಾರ ಪಥ್ಯದ ಬಗ್ಗೆ ಗಮನವಿರಲಿ. ನೀವು ತಿನ್ನುವ ಆಹಾರಕ್ಕೆ ತಕ್ಕಂತೆ ದೈಹಿಕ ಶ್ರಮ ಪಡುತ್ತೀರಾ? ಚೆನ್ನಾಗಿ ಆಹಾರ ತಿಂದು ಅದನ್ನು ಸರಿಯಾದ ರೀತಿ ಜೀರ್ಣಿಸಿ ಕೊಳ್ಳಲು ನಿಮಗೆ ಸಮಯವಿದೆಯೇ ಎಂದು ಯೋಚಿಸಿ ಆಹಾರ ಆಯ್ಕೆ ಮಾಡಿ.  ನಿಮಗೆ ತಿಂಗ ಆಹಾರವನ್ನು ಕರಗಿಸುವಷ್ಟು ದೈಹಿಕ ಕೆಲಸ ಮಾಡಲು ಸಾಧ್ಯವಾಗದಿದ್ದಲ್ಲಿ ತಿನ್ನುವ ಆಹಾರವು ಬೊಜ್ಜುಬರದೆ ಮತ್ತು ಸುಲಭವಾಗಿ ಜೀರ್ಣವಾಗುವ ಹಾಗಿರಬೇಕು. ಇಲ್ಲವಾದಲ್ಲಿ ನಿಮಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ

ಹೆಚ್ಚಿನ ಸುದ್ದಿ