Monday, October 13, 2025
Homeಟಾಪ್ ನ್ಯೂಸ್ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಪಳನಿಸ್ವಾಮಿ: ಚುನಾವಣಾ ಆಯೋಗ

ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಪಳನಿಸ್ವಾಮಿ: ಚುನಾವಣಾ ಆಯೋಗ

ನವದೆಹಲಿ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯಾಗಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮುಂದುವರಿಯುವಂತೆ ಸೂಚಿಸಿರುವ ಭಾರತೀಯ ಚುನಾವಣಾ ಆಯೋಗ, ಚುನಾವಣೆಯಲ್ಲಿ ಸ್ಪರ್ಧೆಗೆ 2 ಎಲೆಗಳ ಚಿಹ್ನೆಯನ್ನೂ ನೀಡಿದೆ.

ಚುನಾವಣಾ ಆಯೋಗದ ಈ ಆದೇಶದಿಂದ ಓ.ಪನ್ನೀರ್ ಸೆಲ್ವಂ ಅವರಿಗೆ ಹಿನ್ನಡೆಯಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಇದೇ ಚಿಹ್ನೆಯನ್ನು ಬಳಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈಗಾಗಲೇ ಬೆಂಗಳೂರಿನ ಪುಲಿಕೇಶಿನಗರದಲ್ಲಿ ಎಐಎಡಿಎಂಕೆ ಅಭ್ಯರ್ಥಿಯಾಗಿ ಅನ್ಬರಸನ್ ಕಣಕ್ಕಿಳಿದಿದ್ದಾರೆ.

ಚುನಾವಣಾ ಆಯೋಗದ ನಿರ್ಧಾರವು ಪಳನಿಸ್ವಾಮಿ ಪಾಲಿಗೆ ಅತಿ ದೊಡ್ಡ ಗೆಲುವಾಗಿದ್ದು, ಒ ಪನ್ನೀರ್ ಸೆಲ್ವಂ ಅವರಿಗೆ ಭಾರೀ ಹಿನ್ನಡೆಯಾಗಿದೆ. ಪನ್ನೀರ್‌ಸೆಲ್ವಂ ಅವರು ತಮ್ಮದೇ ಆದ ಬೇರೆಯದ್ದೇ ರಾಜಕೀಯ ಪಕ್ಷ ಸ್ಥಾಪಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ ಎಂದು ಹೇಳಲಾಗಿದೆ.

ಎಐಎಡಿಎಂಕೆಯ ಎಡಪ್ಪಾಡಿ ಪಳನಿಸ್ವಾಮಿ ಹಾಗೋ ಓ. ಪನ್ನೀರ್‌ಸೆಲ್ವಂ ನಡುವೆ ನಡೆಯುತ್ತಿದ್ದ ನಾಯಕತ್ವ ಗಲಾಟೆಗೆ ಈಗ ಬ್ರೇಕ್‌ ಬಿದ್ದಿದೆ.ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಪ್ರತಿಸ್ಪರ್ಧಿ ಓ ಅವರನ್ನು ಎಐಎಡಿಎಂಕೆಯ ವಿಶೇಷ ಜನರಲ್ ಕೌನ್ಸಿಲ್ ಸಭೆ ಉಚ್ಚಾಟಿಸಿತ್ತು. ನಂತರ ಕೋರ್ಟ್ ಮೆಟ್ಟಿಲೇರಿದ್ದ ನಾಯರಿಬ್ಬರಲ್ಲಿ ಪಳನಿಸ್ವಾಮಿಗೆ ಮೇಲುಗೈ ಆಗಿತ್ತು

ಹೆಚ್ಚಿನ ಸುದ್ದಿ