Monday, July 7, 2025
Homeಚುನಾವಣೆ 2023ಪಾಪ್ ಸಾಂಗ್ ಮೂಲಕ ಮತದಾನ ಜಾಗೃತಿ

ಪಾಪ್ ಸಾಂಗ್ ಮೂಲಕ ಮತದಾನ ಜಾಗೃತಿ

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತದಾನದ ಕುರಿತು ಜಾಗೃತಿ ಕಾರ್ಯಕ್ರಮಗಳು ವಿವಿದೆಡೆ ವಿಭಿನ್ನ ರೀತಿಯಲ್ಲಿ ನಡೆಯುತ್ತಿದೆ. ಬಸ್ ಟಿಕೆಟ್, ನಂದಿನಿ ಹಾಲಿನ ಪ್ಯಾಕೆಟ್, ಬೀದಿ ನಾಟಕಗಳು, ಸ್ಕಿಟ್ ಗಳು‌ ಹೀಗೆ ವಿವಿಧ ಮಾದ್ಯಮಗಳ ಮೂಲಕ ಮತದಾನದ ಪ್ರಮಾಣ ಹೆಚ್ಚಿಸುವ ಪ್ರಯತ್ನವನ್ನು ಚುನಾವಣಾ ಆಯೋಗ ನಡೆಸುತ್ತಿದೆ.

ಇದೀಗ ಹೊಸ ಹಾಡೊಂದನ್ನ ಚುನಾವಣಾ ಆಯೋಗ ರಿಲೀಸ್ ಮಾಡೋ ಮೂಲಕ ಯವ ಜನಾಂಗವನ್ನ ಸೆಳೆಯೋ ಪ್ರಯತ್ನಕ್ಕಿಳಿದಿದೆ. 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನ ಮಾಡಲೇಬೇಕು. ಎಲ್ಲೇ ಇರಿ ಹೇಗೇ ಇರಿ ಮತದಾನ ಮಾಡಲು ಮರೆಯದಿರಿ ಅನ್ನೋ ಸಂದೇಶವನ್ನ ಈ ಹಾಡು ಹೇಳತ್ತೆ. ಮೇ.10ರಂದು ಮತದಾನ ಮಾಡೋದನ್ನ ನೀವೂ ಮರೆಯದಿರಿ.

ಹೆಚ್ಚಿನ ಸುದ್ದಿ