Thursday, October 9, 2025
Homeಚುನಾವಣೆ 2023ಚುನಾವಣಾ ಅಕ್ರಮ : ಒಂದು ವಾರದಲ್ಲಿ ದಾಖಲಾದ ದೂರುಗಳೆಷ್ಟು ಗೊತ್ತೇ?

ಚುನಾವಣಾ ಅಕ್ರಮ : ಒಂದು ವಾರದಲ್ಲಿ ದಾಖಲಾದ ದೂರುಗಳೆಷ್ಟು ಗೊತ್ತೇ?

ಚುನಾವಣೆ ಘೋಷಣೆಯಾದ ದಿನದಿಂದ ಸೋಮವಾರದವರೆಗೆ ಒಟ್ಟಾರೆ ಬಂದಿರುವ ದೂರುಗಳು ಹಾಗೂ ವಿಲೇವಾರಿ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಈ ದೂರುಗಳನ್ನು ಮತದಾರರ ಸಹಾಯವಾಣಿ, ಸಿ-ವಿಜಿಲ್, ಮಾಧ್ಯಮಗಳು ಹಾಗೂ ಸುವಿಧಾ ಆನ್‍ಲೈನ್ ವ್ಯವಸ್ಥೆಯ ಮೂಲಕ ದಾಖಲಿಸಲಾಗಿದೆ.

ಮತದಾರರ ಸಹಾಯವಾಣಿಯ ಮೂಲಕ 1,047 ಕರೆಗಳನ್ನು ಸ್ವೀಕರಿಸಲಾಗಿದ್ದು ಇವುಗಳ ಪೈಕಿ 19 ಮಂದಿ ದೂರುಗಳನ್ನು ದಾಖಲಿಸಿದ್ದರೆ, 1019 ಮಂದಿ ಮಾಹಿತಿ ಕೋರಿ ಕರೆಮಾಡಿದ್ದಾರೆ. ಸಿ-ವಿಜಿಲ್ ಮೂಲಕ 424 ದೂರುಗಳನ್ನು ಸ್ವೀಕರಿಸಲಾಗಿದೆ. ಅವುಗಳ ಪೈಕಿ ಪರವಾನಗಿ ಇಲ್ಲದೆ ಪೋಸ್ಟರ್,ಬ್ಯಾನರ್ ಅಂಟಿಸುವುದು, ಹಣ ಹಂಚಿಕೆ, ಹಣ ಪಾವತಿ, ಉಡುಗೊರೆ ಕೂಪನ್ ಹಂಚಿಕೆ, ಮದ್ಯ ಹಂಚಿಕೆ, ಆಸ್ತಿಪಾಸ್ತಿ ಹಾನಿ, ಸೇರಿದಂತೆ 216 ದೂರುಗಳ ವಿರುದ್ದ ಕ್ರಮ ಕೈಗೊಳ್ಳಲಾಗಿದೆ.
ಟಿವಿ, ಪತ್ರಿಕೆ, ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಮಾಧ್ಯಮಗಳ ಮೂಲಕ 166 ದೂರುಗಳು ದಾಖಲಾಗಿದ್ದು, ಅವುಗಳ ಪೈಕಿ 84 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. ಆನ್‍ಲೈನ್ ಸುವಿಧಾ ಮೂಲಕ 512 ದೂರುಗಳನ್ನು ಸ್ವೀಕರಿಸಲಾಗಿದ್ದು, ಅವುಗಳ ಪೈಕಿ 240 ಅರ್ಜಿಗಳ ಇತ್ಯರ್ಥಕ್ಕೆ ಅನುಮತಿಸಲಾಗಿದೆ ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಹೆಚ್ಚಿನ ಸುದ್ದಿ