Saturday, June 27, 2026
Homeಚುನಾವಣೆ 2023ನನಗೆ ಟಿಕೆಟ್‌ ನೀಡದಿದ್ದರೆ ಸಮಾಧಾನಿಸಲು ದೇವರಿಂದಲೂ ಸಾಧ್ಯವಿಲ್ಲ: ಸೊಗಡು ಶಿವಣ್ಣ

ನನಗೆ ಟಿಕೆಟ್‌ ನೀಡದಿದ್ದರೆ ಸಮಾಧಾನಿಸಲು ದೇವರಿಂದಲೂ ಸಾಧ್ಯವಿಲ್ಲ: ಸೊಗಡು ಶಿವಣ್ಣ

ತುಮಕೂರು ನಗರ ಕ್ಷೇತ್ರದ ಬಿಜೆಪಿ ಟಿಕೆಟ್ ನನಗೆ ಸಿಗುವುದು ಖಚಿತ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದ್ದಾರೆ.

ದೆಹಲಿಯಲ್ಲಿ ಎಲ್ಲರಿಗೂ ಮನವಿ ಮಾಡಲಾಗಿದೆ‌. ಟಿಕೆಟ್ ಸಿಗುವುದು ಖಚಿತವಾಗಿದೆ. ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿಕೊಳ್ಳಲಾಗಿದೆ. ಜನರಿಂದ ಬಂದ ದೇಣಿಗೆ ಡೇಪಾಸಿಟ್ ಮಾಡ್ತಿನಿ. ಜನರ ಋಣ ತೀರಿಸಬೇಕಿದೆ. ಟಿಕೆಟ್ ಸಿಗುವುದು ಖಚಿತ. ಸ್ಪರ್ಧೆ ಮಾಡುವುದು ಖಚಿತ ಎಂದು ಅವರು ಹೇಳಿದ್ದಾರೆ.

ಬಿಜೆಪಿಯಿಂದ ಸಂಪೂರ್ಣವಾಗಿ ಯಡಿಯೂರಪ್ಪರನ್ನು  ಹೊರಗೆ ಇಟ್ಟರೆ ಕಷ್ಟವಾಗುತ್ತದೆ ಎಂದ ಅವರು ಯಡಿಯೂರಪ್ಪರನ್ನ ಹೊರಗೆ ಇಡುವ ಪ್ರಶ್ನೆಯೇ ಇಲ್ಲ‌ ಎಂದು ಹೇಳಿದ್ದಾರೆ.

ನಾನು ಬೊಮ್ಮಾಯಿಗೆ ಆ ಕಾಲದಿಂದಲೂ ಆತ್ಮೀಯ. ಭ್ರಷ್ಟಾಚಾರ ವಿರುದ್ಧ ನಾನು ಮಾತಾಡಿದಿನಿ. ಇದು ನನ್ನ ಕೊನೆಯ ಚುನಾವಣೆ. ಆದರೆ ರಾಜಕೀಯದಿಂದ ನಿವೃತ್ತಿಯಿಲ್ಲ. ಟಿಕೆಟ್ ಸಿಗದಿದ್ದರೆ ನನ್ನನ್ನು ಸಮಾಧಾನ ಮಾಡಲು ಸಾಧ್ಯವಿಲ್ಲ. ಆ ದೇವರು ಬಂದರೂ ನನ್ನ ಮನವೊಲಿಸಲು ಸಾಧ್ಯವಿಲ್ಲ. ನಾನು ಕಣದಲ್ಲಿ ಇರುವುದು ನಿಶ್ಚಿತ ಎಂದು ಅವರು ಹೇಳಿದ್ದಾರೆ.

ಹೆಚ್ಚಿನ ಸುದ್ದಿ